ರೂಪಾಯಿ, ನಿನ್ನ ನುಂಗಿತ್ತ ....
Submitted By: ವಸಂತ ವಿ . ಬೆಕ್ಕೇರಿ
----------------------------------
ಇಷ್ಟು ವರ್ಷ ಏಣಿಕಿ ಎಷ್ಟ ಮಾಡಿದರೂ ಲೆಕ್ಕ ತಪ್ಪಿ ಹೋಗಿತ್ತ ಕೂಡಿ ಕಳೆದು ಬಾಳಿನಾಟ ಎಷ್ಟ ಆಡಿದರೂ ರೂಪಾಯಿ, ನಿನ್ನ ನುಂಗಿತ್ತ .... !! ಬಾಳಿಗಾಗಿ ಬೇಕಂತ ಜಮಾ-ಬಂದಿ ಮಾಡಿದರೂ ಬಾಳಿನ ಉದ್ದಕ್ಕೂ ಸಾಲದಾತ್ತ ಬಾಳಿನ ಗೋಡವಿ ಬೇಡವೆಂದರೂ ಬೆನ್ನ ಬಿಡದ ರೂಪಾಯಿ, ನಿನ್ನ ನುಂಗಿತ್ತ .... !! ಹಗಲೂ ರಾತ್ರಿ, ದಿನಾ ಪ್ರತಿ ದೇಹ ಸವೆದರೂ ಹಣದ ಆಸೆ ಬೆನ್ನ ಬಿಡದಾತ್ತ ಹಣದ ಹೊಳೆಯಲ್ಲಿ ತೇಲಿ ಬಂದರೂ ಮುಳಿಗಿದ ರೂಪಾಯಿ, ನಿನ್ನ ನುಂಗಿತ್ತ ...!! ಸಂಕಟ ಪಟ್ಟು, ಸಡಗರಗೊಂಡಿ ಆದರೂ ಸಾವಿನ ಮನಿ ಹತ್ತಿರಾತ್ತ ಸಾಗಿದ ದಾರಿ, ದೂರ ಸರಿದರೂ ಜತೆ ಬಾರದ ರೂಪಾಯಿ , ನಿನ್ನ ನುಂಗಿತ್ತ .... !! ಸಾವಿರ ಸಾರಿ, ಸಾವಿನ ಸರಸವಾಡಿದರೂ ಬದುಕ ಬಯಕಿ ಹೆಚ್ಚುತ್ತಾ ಹೊತ್ತ ಎಷ್ಟು ಕಷ್ಟ, ನಾಲ್ಕು ದಿನ ಬಾಳೆನೆಂದರೂ ಮುಗಿದ ಬಾಳಿನ ರೂಪಾಯಿ, ನಿನ್ನ ನುಂಗಿತ್ತ....!!
----------------------------------
Reg ID: BF25-5772
Please Note - You can vote only Once. If you have already voted - the voting will be disabled automatically by the system.