Submission 3565

ಕೂಗು

Submitted By: LAKSHMEESH MOOGANUR

----------------------------------

ಮೌನ ಮೆರವಣಿಗೆ ನಡೆಯುತ್ತಿದೆಯಲ್ಲಿ ಮಾತುಗಳು ಬೆತ್ತಲೆಯಾಗಿವೆ ದಿನಕೊಂದು ಬೀಳುವ ಹೆಣಗಳ ನಡುವೆ ಹೆಂಗರುಳಿನ ಬೆತ್ತಲಾಟ ಅದಕೇನು ಕ್ರೌರ್ಯವೆನ್ನುವದಾ ದರ್ಪವೆಂದು ಕರೆಯುವದಾ ಅಥವಾ ಅಹಂಕಾರದ ಉನ್ಮಾದವಾ ಊಹೂ, ಒಂದು ಗೊತ್ತಿಲ್ಲವೆಮಗೆ ಮೂಕಪ್ರೇಕ್ಷಕರಾಗಿಬಿಟ್ಟಿದ್ದೇವೆ ನಾವುಗಳು, ಹೇಳಲಾರದೆ ಏನೂ ಕೇಳಲಾರದೆ ನಮ್ಮ ಮಾತುಗಳು ಸತ್ತುಹೋಗಿವೆಯೆಂದೋ ಅದರಂತೆ ಹಲವರ ಮಾನವೀಯತೆ ಕೂಡ ನೋವನುಭಿಸುವದೇ ಅಬಲರ ಅಬಲೆಯರ ಬಾಳೋ, ಗೋಳೋ ಒಂದು ತಿಳಿಯುತ್ತಿಲ್ಲ ಮಂದಿರಮಸೀದಿಚರ್ಚುಗಳ ಬೋಧನೆಗಳು ಮಹಾಪುರುಷರ ಸಾಧನೆಗಳು ಶೂನ್ಯವಾಗುತಿವೆ ಬಡವರ ಕೂಗಂತೂ ಅರಣ್ಯರೋದನವಾಗುತಿದೆ ಅಲ್ಲಲ್ಲೇ ಮುಚ್ಚಿಹೋಗುತ್ತಿವೆ ಅಲ್ಲಲ್ಲೇ ಮುಚ್ಚಿಹೋಗುತಿವೆ

----------------------------------

Reg ID: BF25-5773

Please Note - You can vote only Once. If you have already voted - the voting will be disabled automatically by the system.

2
Votes
125
Views
7 Months
Since posted

VOTING Closed on Nov 30, 2025!

Scroll to Top