ಮಾತೃ ಭೂಮಿ
Submitted By: Basamma Bhagoji
----------------------------------
ಅಗ್ನಿಜ್ಯೋತಿರ್ಮಯೀ ನೀ, ವಿಶ್ವದ ಮೂಲಶಕ್ತಿ, ನಿನ್ನ ಹೃದಯವೇ ಕಾಲಕ್ಕೂ ಅಭಿಧಮನಿ. ವೇದದ ಮಂತ್ರದಲಿ ನಿನ್ನ ನಾದ ಪ್ರತಿಧ್ವನಿ, ಉಪನಿಷತ್ ಚಿಂತನೆ ನಿನ್ನ ಆಧ್ಯಾತ್ಮ ಧನಿ. ತಕ್ಷಶಿಲಾ ಜ್ಞಾನಧಾರೆ ನಿನ್ನ ಕಿರಣ, ನಾಲಂದಾ ನಿನ್ನ ತಪಸ್ಸಿನ ಪವಿತ್ರ ತರಣ. ಪಾರ್ಥನ ಬಾಣದಲಿ ನಿನ್ನ ಧೈರ್ಯ ಜ್ವಾಲೆ, ಆಶೋಕ ಕರುಣೆಯಲಿ ನಿನ್ನ ಶಾಂತ ಲೀಲೆ. ಕಾಳಿದಾಸ ಕಾವ್ಯದಲಿ ನಿನ್ನ ನಿನಾದ, ಆರ್ಯಭಟ ಲೆಕ್ಕದಲಿ ನಿನ್ನ ಪ್ರಜ್ಞಾ ವಾದ. ಸಿಂಧುನದಿ ತೀರದಲಿ ನಿನ್ನ ಜನ್ಮಗಾನ, ಬಸವಾದಿ ಶರಣರ ವಚನದಲಿ ನಿನ್ನ ಸತ್ಯ ಸ್ಮರಣ. ಸೌರ ಚಕ್ರದಲಿ ನೀ ಶಕ್ತಿ, ಚೇತನ, ದೀಪ, ಮಾತೃ ಭೂಮಿ- ನೀ ತತ್ವ, ನೀ ಓಜ, ನೀ ತೇಜ. ಮಾತೃಭೂಮಿ — ನೀ ತತ್ತ್ವ, ನೀ ನಾದ, ನೀ ಜೀವ.
----------------------------------
Reg ID: BF25-5769
Please Note - You can vote only Once. If you have already voted - the voting will be disabled automatically by the system.