ಹೆಣ್ಣಿನೊಳಗೊಂದು ಹೆಣ್ಣು
Submitted By: SHWETA JAYAKAR
----------------------------------
ಒಂದು ಹನಿ ರಕ್ತ ದೊಳಗೆ ಮೂಡಿ ತಾಯಿ ದೇವತೆಯ ಗರ್ಭದೊಳಗೆ ಮನೆಮಾಡಿ ನವಮಾಸಗಳನ್ನು....... ನವರಾತ್ರಿಯಂತೆ ಕಳೆದು.... ಹೊರ ಜಗತ್ತನ್ನು ಕಾಣುವ ಖುಷಿಯಲ್ಲಿದ್ದರೆ, ಅದೇ ಗರ್ಭಗುಡಿಯಲ್ಲಿ ನನ್ನನ್ನು ಹೊಸಕು ಹಾಕಿದವರು ನೀವೇ...... ಯಾಕೆ ಹೆಣ್ಣಿನೊಳಗೊಂದು ಹೆಣ್ಣು ಹುಟ್ಟ ಬಾರದೆ? ಹೆಣ್ಣು ಮತ್ತೊಂದು ಹೆಣ್ಣಿನ ತಾಯಿ ಆಗಬಾರದೆ? ಒಂದು ಹನಿ ರಕ್ತದಲ್ಲಿ ಜನನ.... ಒಂದು ಹಿಡಿ ಮಣ್ಣಿನಲ್ಲಿ ಮರಣ.... ಇದು ನನ್ನ ಪಾಲಿಗೆ ಹುಸಿ ಕನಸಿಗೆ ಕಾರಣ.. ನನಗೆ ತಾಯಿ ಗರ್ಭಗುಡಿಯೇ ಜನನದ ಸ್ಥಾನ ತಾಯಿ ಗರ್ಭಗುಡಿಯೇ ಮರಣದ ತಾಣ ಇಂತಿ ತೀರಿತು ನನ್ನ - ತಾಯಿಯ ಋಣ
----------------------------------
Reg ID: BF25-5759
Please Note - You can vote only Once. If you have already voted - the voting will be disabled automatically by the system.