Submission 3480

"ಗುರುಗಳಿಗೆ ಒಂದು ನಮನ"

Submitted By: Pooja Uday Marakal

----------------------------------

ಗುರುವೇ ದೇವರು, ಗುರುವೇ ಶಕ್ತಿ, ಗುರುವೇ ಸ್ಪೂರ್ತಿ. ಗುರುವಿಲ್ಲದೆ ಈ ಬದುಕೂ ಶೂನ್ಯ, ಗುರುವಿಲ್ಲದೆ ಭವಿಷ್ಯವಿಲ್ಲ, ಗುರುವೇ ಎಲ್ಲ ಈ ಜಗದಲಿ. ಶಿಕ್ಷಣಕ್ಕೆ ಬೆಲೆ ಬರುವುದೇ ಗುರುವಿನಿಂದ, ಅದು ತಂದೆ-ತಾಯಿಯಿಂದ, ಅಥವಾ ಶಿಕ್ಷಕರಿಂದ ಬಂದರೂ ಅದು ಒಂದು ಮಾರ್ಗದರ್ಶನವಿದ್ದಂತೆ. ಆದ್ದರಿಂದ ಈಗಿನ ಕಾಲದಲ್ಲಿ ಶಿಕ್ಷಣಕ್ಕೆ ಬೆಲೆ ಸಿಗಬೇಕಾಗಿದೆ, ಎಲ್ಲರನ್ನು ಶಿಕ್ಷಣದತ್ತ ಕರೆದೊಯ್ಯಬೇಕಾಗಿದೆ, ಶಿಕ್ಷಣವನ್ನು ಪ್ರಗತಿಯತ್ತ ಸಾಗಿಸಬೇಕಾಗಿದೆ. ಪ್ರತಿ ಮನೆಗಳಲ್ಲೂ ಶಿಕ್ಷಣದ ಧನಾತ್ಮಕ ಭಾವನೆಯನ್ನು ಮೂಡಿಸಬೇಕಾಗಿದೆ, ಎಲ್ಲರೂ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕಾಗಿ ಶಿಕ್ಷಣವನ್ನು ಪಡೆಯಬೇಕಾಗಿದೆ, ಆದ್ದರಿಂದ ಗುರುವಿಗೆ ನನ್ನದೊಂದು ನಮನ.

----------------------------------

Reg ID: BF25-5739

Please Note - You can vote only Once. If you have already voted - the voting will be disabled automatically by the system.

75
Votes
550
Views
8 Months
Since posted

VOTING Closed on Nov 30, 2025!

Scroll to Top