Submission 3462

ಕನ್ನಡತಿಗಾಗಿ

Submitted By: ಶಂಕರ ಮಹಾದೇವ ದೇಸಾಯಿ

----------------------------------

ಓ ತಾಯಿ ಕನ್ನಡತಿ ನೀ ಎನ್ನ ಮಾತೆ ಈ ನಿನ್ನ ಕಂದನಿಗೆ ನೀ ಎಂದು ಒಡತಿ ನಿನಗಾಗಿ ನಾ ಏನೆಂದು ಹಾಡಲಿ ನಿನ್ನ ಹಿರಿಮೆ ಸಾರಲು ಯಾವ ಕೋಶ ತೆರೆಯಲಿ ನಿನ್ನ ಕಂದ ನೆನೆದರೆ ನೀರಂತೆ ನೀ ಬರುವೆ ಅಮ್ಮಾ ಎಂದು ಕರೆದರೆ ಸಿಹಿಜೇನ ಸುರಿವೆ ಮಾತೆ ನಿನ್ನ ಮರೆದರೆ ನೀ ಎನ್ನ ನೆನೆವೆ ಮರೆತು ನಾ ಎಡವಿದರೆ ನೀ ನನ್ನ ಪೊರೆವೆ ಹರುಷದಿಂದ ಹೇಳುವೆ ಈ ಜಗದ ವಿಷಯ ಪ್ರೇಮದಿಂದ ತೆರೆದಿಡುವೆ ಈ ಭುವಿಯ ವಿಸ್ಮಯ ನಿನ್ನ ಭಾಷೆ ಚೆಂದ ನಾ ನಿನ್ನ ಕಂದ ಅದಕ್ಕಾಗಿ ಹೆಮ್ಮೆ ಹೆಮ್ಮೆಗಾಗಿ ಈ ಬದುಕು

----------------------------------

Reg ID: BF25-5729

Please Note - You can vote only Once. If you have already voted - the voting will be disabled automatically by the system.

0
Votes
107
Views
11 Months
Since posted

VOTING Closed on Nov 30, 2025!

Scroll to Top