ಕೇಳಿದ್ದೇನೆ
Submitted By: DR BASAVARAJ BILAGI
----------------------------------
ಕೇಳಿದ್ದೇನೆ, ಕಳೆದ ಕೆಲವು ದಿನಗಳಿಂದ ನೀನು ಮೊದಲಿನಂತೆ ಇರುವುದಿಲ್ಲವಂತೆ. ನಿದ್ರೆ ನೀರಡಿಕೆ ಮರೆತು, ಸದಾ ಯಾವುದೋ ಚಿಂತೆಯಲ್ಲಿ, ಕಳೆದು ಹೋಗಿರುವೆಯಂತೆ. ಬಾಗಿಲಿಗೆ ಬಂದು ಸುತ್ತಲೂ ಕಣ್ಣು ಹಾಯಿಸಿ, ಮತ್ತದೇ ಕತ್ತಲ ಕೋಣೆಗೆ ಹೋಗುವೆಯಂತೆ. ಯಾವುದೋ ವಸ್ತುವನ್ನು ಎಲ್ಲೋ ಇಟ್ಟು, ಮನೆಯವರ ಮೇಲೆ ಉರಿದು ಬೀಳುವೆಯಂತೆ. ಏನಾಗಿದೆ ಎಂದು ಯಾರಾದರೂ ಕೇಳಿದರೆ, ಕಣ್ಣೋಟದಲ್ಲೇ ಬೆಂಕಿ ಉಗುಳುವೆಯಂತೆ. ಸರಿಕರು ಬುದ್ಧಿವಾದ ಹೇಳಲು ಮುಂದಾದರೆ, ನಿಮ್ಮೇದೆಯ ಬೆಂಕಿ ಆರಿಸಿಕೊಳ್ಳಿ ಎನ್ನುವೆಯಂತೆ.
----------------------------------
Reg ID: BF25-5728
Please Note - You can vote only Once. If you have already voted - the voting will be disabled automatically by the system.