Submission 3363

ಲೇಖನಿಯ ಮಾತು

Submitted By: Anirudh V A

----------------------------------

ಓ ಲೇಖನಿ ! ನಿನ್ನ ಹೊರೆತು ಬದುಕುವುದೇಗೆ? ನಿನ್ನ ಮೃದುವಾದ ಮನಸನ್ನು ವರ್ಣಿಸಲಾಗದೆ... ನಿನ್ನೊಂದಿಗೆ ಮೆಲ್ಲನೆ ಬೆರೆತು ಹೋದೆ ಸದ್ದಿಲ್ಲದೆ... ಮರಳಿ ಅಣು ಕ್ಷಣವೇ ಪ್ರಿಯ ದೋಸ್ತನಾದೆ... ಒಬ್ಬಂಟಿ ನೀನಲ್ಲ , ನಮ್ಮಿಬ್ಬರ ಸಂಗಮವೇ ಜೋನಿಬೆಲ್ಲ... ನೆನಪಿನ ಮೋಡದಲ್ಲಿ ಕಳೆದುಹೋಗಿರುವೆ ಇಂದು... ಬಾನಾಚೆಗೇರಿ ಸಾಗಿದೆ ಪದಗಳ ಹನಿಯಲ್ಲಿ ಮಿಂದು... ಮನದೊಡನೆ ಚಿಗುರಿತು ಒಲವಿನ ಭಾವನೆಯೊಂದು... ತಿಳಿಯಿತೀಗ ಈ ಹುಸಿಗನಸಿಗೆ ಲೇಖನಿಯೆ ಕಾರಣವೆಂದು... ಒಬ್ಬಂಟಿ ನೀನಲ್ಲ , ನಮ್ಮಿಬ್ಬರ ಸಂಗಮವೇ ಜೋನಿಬೆಲ್ಲ... ಓ ಲೇಖನಿ ! ನೀನೇಕೆ ಇಷ್ಟೊಂದು ಮೌನ ? ಮೌನದ ಸುಳಿಯಲ್ಲೆ ಗ್ರಹಿಸದೆ ನಾ ಜಗದ ಜ್ಞಾನ... ಸಪೂರವಾಗಿದ್ದರು ಸೆಳೆಯುವೆ ಎಲ್ಲರ ಗಮನ... ನೋವು ನಲಿವಲ್ಲು ನಡೆಸುವೆ ನಾ ಬರವಣಿಗೆಯ ಜೀವನ... ಒಬ್ಬಂಟಿ ನೀನಲ್ಲ , ನಮ್ಮಿಬ್ಬರ ಸಂಗಮವೇ ಜೋನಿಬೆಲ್ಲ...

----------------------------------

Reg ID: BF25-5691

Please Note - You can vote only Once. If you have already voted - the voting will be disabled automatically by the system.

148
Votes
896
Views
7 Months
Since posted

VOTING Closed on Nov 30, 2025!

Scroll to Top