ಹೆಣ್ಣಿಗೇಕೆ ಭಯದ ಬದುಕು?
Submitted By: Geeta Rotti
----------------------------------
ಬದುಕೆಂಬ ಸುಂದರ ಸೃಷ್ಟಿಯ ಪಯಣದಲಿ, ಹೊರಟಾಗ ಹೆಣ್ಣೋಬ್ಬಳು ಕೈ ಬಿಸುತ ಹರುಷದಲಿ, ಸಾವಿರ ಕನಸಿನ ಗೋಪುರ ಹೊತ್ತು ಕಣ್ಣಂಚಿನಲಿ, ದೂರದಲಿ ಕಾಯುತ ಕುಳಿತಿಹನೋಬ್ಬ ಕಾಮಾಂಧತೆಯಲಿ, ಬಿರುಕು ಬಿದ್ದಿದೆ ಸೋದರತ್ವದ ಕವಚದಲಿ, ಸುರಕ್ಷತೆ ಕಾಣದಾಗಿದೆ ಅಪ್ಪನ ಮಮತೆಯ ಅಪ್ಪುಗೆಯಲಿ, ಅಯ್ಯೋ ಭಗವಂತ; ಕಳುಸಿದೆ ನನ್ನ ಯಾವ ನರಕದಲಿ? ಇಳಿ ವಯಸ್ಸಿನ ನೊಂದ ಜೀವವು ಕಾಣದಾಗಿದೆ ಪಾಪಿ ಕಣ್ಣಲಿ, ಎಳೆ ವಯಸ್ಸಿನ ಭವಿಷ್ಯವು ಬಾಡಿಹೋಗಿದೆ ಭಯದಲಿ, ಹೇಗೆ ಬದುಕಲಿ ನಾ ಈ ರಣಹದ್ದುಗಳ ಸಮೂಹದಲಿ? ಕುಕ್ಕಿ ತಿನ್ನುವ ಈ ಪಾಪಿಯ ನೋಟವ ಹೇಗೆ ನಾ ಸಹಿಸಲಿ? ವಿರೋಧಿಸಿದರೆ ಬೆಂದು ಹೋಗುವೆ ನಾ ಬಲವಂತದ ಬೇಗೆಯಲಿ, ಒಲಿದರೆ ಕಳೆದು ಹೋಗುವೆ ನಾ ನಕ್ಕು ನಗಿಸುವ ಮೋಸದಲಿ, ಕಾಣದಾಗಿದೆ ಭವಿಷ್ಯದ ಬೆಳಕು ಈ ಭಯದ ಅಂಧಕಾರದಲಿ, ಹೆಣ್ಣಿಗೇಕೆ ಭಯದ ಬದುಕು; ಈ ಸುಂದರ ಸೃಷ್ಟಿಯ ಪಯಣದಲಿ????
----------------------------------
Reg ID: BF25-5600
Please Note - You can vote only Once. If you have already voted - the voting will be disabled automatically by the system.