Submission 3146

ಕಟ್ಟುವೆನೆ ಕರಿಮಣಿಯ

Submitted By: Sreehari P

----------------------------------

ಕಣ್ಣೀರ ಕಟ್ಟೊಡೆಯೇ ಕೆರಳಿದೆ ಕಾರ್ಮೋಡ ಕರಗುತ್ತಾ ಕೊರಗುತ್ತಾ ಕಾತರದಿ ಕಾಯುತ್ತಾ | ಕಾನನದಾ ಕುಟಿಲದಿ ಕಾಣುವೆನೆ ಕಣ್ಣಂತೆ ಕಗ್ಗತ್ತಲ ಕಡುರಾತ್ರಿಲಿ ಕಂದೀಲ ಕಪ್ಪಂತೆ || ೧ || ಕೆಳಧಮನಿ ಕನವರಿಸೆ ಕನಲಿಕೆಯ ಕಸುರೇಕೆ ಕಾದಿಹೆನೆ ಕರಾಳದಿ ಕರಪಲ್ಲವ ಕನಕಾಂಗಿ | ಕಟ್ಟಿನಿಯ ಕಣ್ನೋಟದ ಕಿರುನಗೆಗೆ ಕಮರಿಹೆನೆ ಕಣ್ಕಪ್ಪ ಕಾಡಿಗೆಯ ಕಡುಚದುರೆ ಕನ್ನಿಕೆಯೇ || ೨ || ಕಮಲದಾ ಕೂಪದಿಂ ಕಾಯುವೆನೆ ಕಣ್ಣೀರ ಕಾಡಿಸದೆ ಕನಿಕರಿಸೆ ಕನಸೀನ ಕಣ್ಮಣಿಯೇ | ಕರಗೈವ ಕರೆಯೋಲೆ ಕೈಗಿತ್ತು ಕರೆಯುತಿಹೆ ಕೈಗುೂಡೆ ಕೋಗಿಲೆಯ ಕಟ್ಟುವೆನೆ ಕರಿಮಣಿಯ || ೩ ||

----------------------------------

Reg ID: BF25-5579

Please Note - You can vote only Once. If you have already voted - the voting will be disabled automatically by the system.

91
Votes
386
Views
8 Months
Since posted

VOTING Closed on Nov 30, 2025!

Scroll to Top