ಅಪ್ಪ
Submitted By: Tukaram Nayak
----------------------------------
ವಿಮಾನವೆಂಬ ಹೆಗಲ ಮೇಲೆ ಕೂರಿಸಿ, ತೋರಿಸಿದೆ ಇಡೀ ಜಗವ; ಕಪ್ಪು ಹಲಗೆಯ ಮೇಲೆ ಕೈ ಹಿಡಿದು ಬರೆಸಿ ಬೆಳಗಿಸಿದೆ ನನ್ನ ಮನವ: ನೀ ರೆಕ್ಕೆಯ ಕೊಟ್ಟಿರುವೆ ಹಾರಲು ಈ ಜಗದಲ್ಲಿ , ನಿನ್ನ ಪ್ರೀತಿಯ ನಾ ಕಂಡೆ ಆ ನಿನ್ನ ಕಣ್ಣಲ್ಲಿ: ನಿನ್ನ ಮಾರ್ಗದರ್ಶನ ಇರಲಿ ಎಂದಿಗೂ ನನ್ನ ಜೀವನದಲ್ಲಿ, ಆದಾರ ಗೌರವದಿಂದ ಪೂಜಿಸುವೆ ನನ್ನ ಹೃದಯದಲ್ಲಿ : ನಿನ್ನ ಕಾಳಜಿಯ ನೀ, ಬಯಸದೆ; ನನ್ನ ಮಗ ರಾಜನಂತೆ ಇರಲಿ ಎಂದು ಬೆವರ ಸುರಿಸಿದೆ: ವರ್ತಿಸಿದ್ದರೆ ನಿನ್ನ ನೋವನ್ನು ಅರಿಯದೇ , ಕ್ಷಮಿಸುಬಿಡು ನನ್ನ ತಪ್ಪನ್ನು ಮರೆಯದೆ. ನೀ ತೋರಿದ ದಾರಿಯಲ್ಲಿ ನಡೆವೆ ಎಂದು ನೀಡುವೆ ವಚನವ ; ನನ್ನ ದುಡಿಮೆಯಿಂದ ಮರೆಸುವೆ ನಿನ್ನ ಕಷ್ಟವ: ನನ್ನ ಪ್ರೀತಿ ಉಸಿರಲ್ಲಿ ನೀ ಉಸಿರಾಗಿರು ಎಂದೆಂದಿಗೂ , ನೀ ಇಲ್ಲವಾದರೆ ನಾನು ಉಸಿರಾಡುತ್ತಿರುವ ಶವ.....
----------------------------------
Reg ID: BF25-5566
Please Note - You can vote only Once. If you have already voted - the voting will be disabled automatically by the system.