Submission 3059

ಯಾರವಳು?

Submitted By: Veeresh Malagi

----------------------------------

ಮುಂಜಾನೆ ಮಂಜಲ್ಲಿ,ಮುಸ್ಸಂಜೆ ಹೊತ್ತಲ್ಲಿ , ಆ ಸೂರ್ಯ ಹುಟ್ಟಿ ಬರುವ, ನನ್ನವಳ ನೋಡಲು , ನೀನ್ಯಾರೆ ಅಂದಾಗ ತುಸುನಾಚಿ ನಿಂತಳು , ನನ್ನನೇ ನೋಡುತ್ತಾ ಮರೆಯಾಗಿ ಹೋದಳು,ಯಾರವಳು? ದಿನ ದಿನ ಬರುವಳು ಮನಸಿನಲಿ, ಪ್ರತಿ ದಿನ ಕಾಡುವಳು ಕನಸಿನಲಿ, ದಾಸನಾದೆ ಅವಳ ಅಂದಕೆ , ಸೋತುಹೋದೆ ಅವಳ ನೋಟಕೆ , ಗೊತ್ತಿಲದೇ ಹಿಡಿಸಿದಳು ಈ ಪ್ರೀತಿಯ ಹುಚ್ಚು, ಯಾರವಳು? ಕಾಯುತಿದೆ ನನ್ನ ಹೃದಯದ ಪ್ರೀತಿ ಪೆಟ್ಟಿಗೆ, ಎಂದಾದರೂ ಬರುವುದೆಂದು ಅವಳ ಪ್ರೀತಿಯ ಹೊತ್ತಿಗೆ , ಸಾಕಾಗಿದೆ ಕನಸಿಗೂ ಈ ನಿದ್ದೆಯ ಹೊತ್ತು , ಬೇಕಾಗಿದೆ ಇನ್ನಾದರೂ ಅವಳ ಪ್ರೀತಿಯ ಮತ್ತು , ಗೊತ್ತಿಲದೇ ಹಿಡಿಸಿದಳು ಪ್ರೀತಿಯ ಹುಚ್ಚು ಯಾರವಳು?

----------------------------------

Reg ID: BF25-5546

Please Note - You can vote only Once. If you have already voted - the voting will be disabled automatically by the system.

39
Votes
314
Views
10 Months
Since posted

VOTING Closed on Nov 30, 2025!

Scroll to Top