Submission 3018

"ಜೀವನ"ದಿ

Submitted By: Sachin S Shet

----------------------------------

ಸ್ವಚ್ಹoದವಾದ ಹಚ್ಚಹಸುರಿನ ದಟ್ಟ ಕಾನನ, ತನ್ಮಧ್ಯೆ ಕೇಳುವ ಇಂಪಾದ ಜುಳು ಜುಳು ಗಾನ. ರವಿಕಿರಣ ಭುವಿಯನು ಸ್ಪರ್ಶಿಸಲು ಸೆಣಸಲು, ಪಶ್ಚಿಮ ಘಟ್ಟದ ಮೈಮಾಟ ನೋಡಲು ಕಾದಿರಲು. ಅಂಬುತೀರ್ಥ ದಲ್ಲಿ ಜನಿಸಿ, ಇಳೆಯನು ತಣಿಸಿ, ಬಳ್ಳಿಯಂತೆ ಹರಿದು, ಭೋರ್ಗರೆದು ಸೇರುವಳು ಕಡಲೊಡಲು, ಕಣ್ಣುಗಳೆರಡು ಸಾಕೇ ಈ ರಮ್ಯ ರಮಣೀಯ ದೃಶ್ಯ ಸವಿಯಲು? ಅಭಿವೃದ್ಧಿಯ ನೆಪದಲಿ ಕುತ್ತು ತರುವರೇ ಶರಾವತಿಗೆ? ಮುನ್ನುಡಿ ಬರೆಯುವರೇ ಮನುಕುಲದ ಅವನತಿಗೆ? ಪರಿಸರದ ಸಮಾಧಿ ಮೇಲೆ ನಿರ್ಮಿಸುವ ಪಾಳು ಅರಮನೆ, ಬಲಿಯಾಗಬೇಕೇ ಮುಖ ಜೀವಿಗಳು ಸುಮ್ಮನೇ.? ಶರಾವತಿ ಉತ್ತರಕನ್ನಡದ 'ಜೀವನದಿ', ಹರಿಸಿದಳು ಅಮೃತಧಾರೆಯ ನಮ್ಮ "ಜೀವನ"ದಿ. ಇಂದು ಕೇಳುತ್ತಿರಲು ಅವಳ ಅಳಲು, ಬರಿದಾಗದಂತೆ ಮಾಡೋಣ ಕಡಲೊಡಲು.

----------------------------------

Reg ID: BF25-5532

Please Note - You can vote only Once. If you have already voted - the voting will be disabled automatically by the system.

44
Votes
412
Views
11 Months
Since posted

VOTING Closed on Nov 30, 2025!

Scroll to Top