ಅಪ್ಪ...!!
Submitted By: Swati Hatti
----------------------------------
ಅಪ್ಪ...!! ನಾನೇನು ಕವಿ ಅಲ್ಲ, ನಿನ್ನ ವರ್ಣಿಸಲು.... ನಿಘಂಟಿನ ಪದಗಳು ಸಾಲವು ನಿನ್ನ ಚಿತ್ರಿಸಲು.... ‘ಅಪ್ಪ’ ಎನ್ನುವ ಶಬ್ದವೇ ಸಾಕು, ಆದರೆ ಆ ಪದಗಳಿಗೂ ಮೀರಿದವನು ನೀನು... ಅಪ್ಪಾ, ನೀನು ನನ್ನ ನೆರಳಿನ ಮರ, ಸೂರ್ಯನ ಬಿಸಿಲಿನಲ್ಲಿಯೂ ತಂಪಾದ ಹರಿವಿನತರ.... ನಿನ್ನ ಮಾತುಗಳೇ ನನಗೆ ದಾರಿದೀಪ, ನೀನೇ ನನಗೆ ದೇವರ ರೂಪ.... ಕನಸು ಕಟ್ಟಿಕೊಟ್ಟ ಕನಸುಗಾರ ನೀನೆ, ಬದುಕಿಗೆ ಮೊದಲ ಗುರು ನೀನೆ..... ನನ್ನ ಜೀವನದ ಅಪರೂಪದ ಉಡುಗೊರೆ ನೀನೆ, ಹೃದಯದಲ್ಲಿ ನೆಲಸಿದ ಹೀರೋ ನೀನೆ.... ನನ್ನ ಹರ್ಷಭರಿತ ಬದುಕು, ನಿನ್ನ ಬೆವರಿನ ಹನಿ, ನಾನು ಜೀವಿಸುವವರೆಗೂ,ನಿನ್ನ ಪಾದಗಳಿಗೆ ಚಿರಋಣಿ. ವರ್ಣಿಸಲಾರದ ಭಾವನೆ ನೀನು ....ಅಪ್ಪ...!!!!
----------------------------------
Reg ID: BF25-5521
Please Note - You can vote only Once. If you have already voted - the voting will be disabled automatically by the system.