ನನ್ನ ಭಾಷೆ
Submitted By: Lankesh Patil
----------------------------------
ನನ್ನ ಭಾಷೆ ಅಕ್ಕರೆಯ ಭಾಷೆ, ಸಿಹಿಯಾದ ಸಕ್ಕರೆಯ ಭಾಷೆ... ಎದೆಗೆ ಅಮೃತವನ್ನು ಸುರಿದ ಭಾಷೆ, ಜೀವದ ಜೀವನಾಡಿಯಲ್ಲಿ ಬೆರೆತ ಭಾಷೆ... ನಂಟುಗಳನ್ನು ಬೆಸೆದ ಬಾಂಧವ್ಯದ ಭಾಷೆ, ಕಗ್ಗಂಟುಗಳನ್ನು ಮುರಿದ ದಿವ್ಯಜ್ಯೋತಿಯ ಭಾಷೆ.. ಕಾವ್ಯ, ಕವಿತೆಗಳ ಸಾಲಿಗೆ ಮೇರುಗು ತಂದ ಭಾಷೆ, ಕಬ್ಬಿಗನ ಅಂತರಂಗದಲ್ಲಿ ಇಳಿದು ಎದೆಗಂಟಿದ ಭಾಷೆ.. ಹೊನಲು ಬೆಳಕಿನ ಕಿರಣಗಳಿಗೆ ಮಾತು ಕಲಿಸಿದ ಭಾಷೆ, ಪ್ರಕೃತಿಯನ್ನು ತನ್ನ ಪದಗಳಿಂದ ಮೋಹಗೊಳಿಸಿದ ಭಾಷೆ.. ತಾಯಿ ಭುವನೇಶ್ವರಿ ದೇವಿಯ ಭಾಷೆ, ಕರುನಾಡ ಹೃದಯಗಳ ಸೊಂಪಿನ ಭಾಷೆ, ಸಾಹಿತ್ಯ ರತ್ನಗಳನ್ನು ಹಡೆದ ಭಾಷೆ, ಸಾಹಿತ್ಯಕ್ಕೆ ಜೀವ ತಂದ ಭಾಷೆ, ನಮ್ಮೆಲ್ಲರ ಹೆಮ್ಮೆಯ ಕನ್ನಡ ಭಾಷೆ...!
----------------------------------
Reg ID: BF25-5518
Please Note - You can vote only Once. If you have already voted - the voting will be disabled automatically by the system.