ನನ್ನಪ್ಪ
Submitted By: Nagalakshmi Siddappa Maharajpete
----------------------------------
ಮೌನದ ಬೆನ್ನಲಿ ಪ್ರೀತಿ ಮುದುಡಿಟ್ಟವ ಮನೆಯ ಬಾಗಿಲಲಿ ಕಾವಲು ನಿಂತವ ತನ್ನ ಕನಸ ಮರೆತು ನನ್ನ ಕನಸ ಕಟ್ಟಿದವ ಅವನ ಬೆವರಿನ ಹನಿಗೆ ನನ್ನ ಬದುಕಿನ ಹೆಸರಿಟ್ಟವ ಬಿಸಿಲು ಅವಗೆ ತಾಕಿದರು ಎನಗೆ ನೆರಳಾದವ ಅವಗೆ ಬಿರುಗಾಳಿ ಬೀಸಿದರು ಎನಗೆ ಕವಚವಾದವ ನೋವನು ತನ್ನಲೆ ಬಚ್ಚಿಟ್ಟು ನನಗಾಗಿ ನಕ್ಕವ ನನ್ನ ಗೆಲುವಿಗೆ ಪ್ರತಿಕ್ಷಣ ಜೊತೆಯಾದವ ಅವನ ಹೃದಯದ ತೂಕ ಯಾರೂ ಅಳಿಯರು ಅವನ ಬಲದ ಮುಂದೆ ಯಾರೂ ಇಲ್ಲರು ಅವಗಾಗಿ ಅಲ್ಲ ನನಗಾಗಿ ಬದುಕಿದವ ನಗುಮುಖದ ಒಡೆಯ ಸಾವಿರ ಜನರ ಎದುರು ನಾ ಗೆಲ್ಲಲು ಸ್ಫೂರ್ತಿ ಧೈರ್ಯದ ಕಳಶ ನನಗಾಗಿ ಜೀವತೇದ ತ್ಯಾಗದ ಮೂರ್ತಿ....ನನ್ನಪ್ಪ
----------------------------------
Reg ID: BF25-5486
Please Note - You can vote only Once. If you have already voted - the voting will be disabled automatically by the system.