Submission 2872

ಯಾರವನು?

Submitted By: Ankush R Gundya

----------------------------------

ನದಿಯಾದವನು ನಾನು ನನ್ನೊಳಗೆ ಹರಿಯುತ್ತಿದ್ದ ನೀರು ನೀನು ಅಣೆಕಟ್ಟು ಕಟ್ಟಿ ನಿನ್ನನ್ನು ತಡೆದವನು, ಯಾರವನು? ಕಬ್ಬಿನಂತಿದ್ದವನು ನಾನು ನನ್ನೊಳಗಿನ ಸಿಹಿಯಾಗಿದ್ದವಳು ನೀನು ನಿನ್ನನು ಸವೆದವನು ಬೇರೊಬ್ಬನು, ಯಾರವನು? ನಿನಗಾಗಿ ಬೆಟ್ಟದಂತೆ ಕಾದು ನಿಂತವನು ನಾನು ತಂಗಾಳಿಯಾಗಿ ನನ್ನೆಡೆಗೆ ಬಂದವಳು ನೀನು ಬೆಟ್ಟವನೇರಿ ನಿನ್ನ ತಂಪನ್ನು ಅನುಭವಿಸಿದವನು, ಯಾರವನು? ಸಮುದ್ರವಾಗಿ ಇದ್ದವನು ನಾನು ನನ್ನೊಳಗೆ ಮೀನಿನಂತೆ ಇದ್ದವಳು ನೀನು ನಿನಗೆ ಗಾಳ ಹಾಕಿದವನು, ಯಾರವನು? ...ಹೇಳಿಬಿಡು ಯಾರವನು?

----------------------------------

Reg ID: BF25-5467

Please Note - You can vote only Once. If you have already voted - the voting will be disabled automatically by the system.

157
Votes
753
Views
9 Months
Since posted

VOTING Closed on Nov 30, 2025!

Scroll to Top