ಕಂದೀಲು
Submitted By: ABHISHEKA H Y
----------------------------------
ಸ್ಫೋಟ! ಹುಟ್ಟಿತು ವಿಶ್ವ ಘಟ.. ವಿಶ್ವಪಥದಿ ಹಾಲುಹಾದಿ, ಭೂಮಿ ಎಂಬ ಗ್ರಹದಿ, ಮನುಕುಲದ ಬುನಾದಿ...ಸಮಾಧಿ ಕತ್ತಲು ! ಸುತ್ತಲೆಲ್ಲಾ ಬಿತ್ತಲು ಭೂಮಿಗೆ ಮಾತ್ರ ಹಗಲಿಗೆ ಸೂರ್ಯ ರಾತ್ರಿಗೆ ಚಂದ್ರ ತಮದ ಪೊರೆ ಹರಿಯಲು ನಾನಾ ಮಜಲು ಮನಸಿನ ಕತ್ತಲೆ,ಕನಸಿನ ಬತ್ತಲೆ ಸಮಾಜದಿ ಮುಸುಕಿ ನುಂಗುವ ಕತ್ತಲೆ ; ಮನೆ! ಬರೀ ಹಿತ್ತಲೇ.. ಈ ಕತ್ತಲೆಯ ಕತ್ತ ಹಿಸುಕುವ ಕರಿಗುರುಳಲಿ ಬೈತಲೆಯಾಗುವ ಕಂದೀಲಾರು ! ಭಾರತಿ ನೀನೆ ತೋರು ನಿನಗೆ ಸರಿ ಯಾರು ? ಹೇ ಚಾರುಮತಿ ಕ್ರಾಂತಿಯ ಭ್ರಾಂತಿಗೆ ಆಮಂತ್ರಿಸು
----------------------------------
Reg ID: BF25-5414
Please Note - You can vote only Once. If you have already voted - the voting will be disabled automatically by the system.