Submission 2737

ತಾಯಿ

Submitted By: Lakshman bhajantri

----------------------------------

ತಾಯಿ ಜೀವ ಉಂಡು ನೋವ ನೀಡಿದಳು ಜನ್ಮವ ತನ್ನ ಜೀವನ ಮರೆತು ಬೆಳೆಸುವಳು ಮಗುವ ಬಾಳಲ್ಲಿ ಬೆರೆತು ಸಾಗೋಳು ಪ್ರೀತಿಯ ಕಡಲನ್ನು ಹೊತ್ತು ಕಡಲ ಅಲೆಗಳು ದಡಕ್ಕೆ ಮತ್ತಿಕುವಂತೆ ನಿಲ್ಲದು ಅವಳ ಪ್ರೀತಿ ಯಾವತ್ತು ಅವಳೊಂದು ಸ್ವಾತಿಯ ಮುತ್ತು ನನಗವಳು ಬೆಲೆ ಕಟ್ಟಲಾಗದ ಸ್ವತ್ತು ಬ್ರಹ್ಮನಿಗೆ ಗೊತ್ತು ಅವಳೊಂದು ಸಹನೆಯ ತುತ್ತು ಅವಳು ಕೈಗೆಟಕುವ ನೆರಳು ನೀಡುವ ಚತ್ತು ಮಣ್ಣಲ್ಲಿ ಸಿಕ್ಕುತ್ತ ಚಿನ್ನವೆಂಬ ವಸ್ತು ಮಣ್ಣಲ್ಲಿ ಮಣ್ಣಾದ ತಾಯಿಯ ದೇಹ ಕಲೆತು ಪ್ರೀತಿ ಕರುಣೆ ಸಹನೆಯ ಮೂರ್ತಿ ಎಷ್ಟು ಹೇಳಿದರೂ ಮುಗಿಯದು ಅವಳ ಕೀರ್ತಿ ಬ್ರಹ್ಮನನ್ನೇ ಸೃಷ್ಟಿಸಿದ ಸೃಷ್ಟಿಕರ್ತೆ ಮುಗಿಲೆತ್ತರಕ್ಕೆ ಹಾರಿದೆ ಅವಳ ಕೀರ್ತಿ ಪತಾಕೆ ಜಗದೊಳಗೊಬ್ಬಳೇ ಜನ್ಮದಾತೆ ನೀಗಿದಳು ಆ ದೇವರ ಕೊರತೆ ಅವಳು ತಾಯಿ ಎಂಬ ದೇವತೆ.

----------------------------------

Reg ID: BF25-5412

Please Note - You can vote only Once. If you have already voted - the voting will be disabled automatically by the system.

3
Votes
157
Views
11 Months
Since posted

VOTING Closed on Nov 30, 2025!

Scroll to Top