Submission 2729

ಸಂಜೆಗೆಲ್ಲಾ ಗೊತ್ತಿದೆ

Submitted By: Savitha Nagaraj

----------------------------------

ಬೆಸೆದಿಹ ಮನಗಳು ಜೊತೆಯಾಗಿರಲು ರವಿಯು ಕೆಂಪಾಗಿ ಓಕುಳಿ ಚೆಲ್ಲಿರಲು ಸಂಜೆಗೆಲ್ಲಾ ಗೊತ್ತಿದೆ ಚಂದ್ರನ ಕಾವಲು ಇಳೆಯ ಸೊಬಗಿನಂದದ ಮೇಲಿರಲು ಜೋಡಿ ಜೀವಗಳ ಒಲುಮೆಯ ಭಾವ ಮಾತಿಗೂ ಸಿಗದಿಹ ದಿವ್ಯ ಅನುಭವ ಸಂಜೆಗೆಲ್ಲಾ ಗೊತ್ತಿದೆ ಮೌನದ ಕಲರವ ಮೆಲ್ಲುಸಿರಿನಲಿ ಒಸರಿದಂತ ಪಲ್ಲವ ಕಡಲ ಅಲೆಗಳಂದದಿ ನೆನಪುಗಳ ಏರಿಳಿತ ಸೋಕುತ್ತ ಹೋದಂತೆಲ್ಲವೂ ಪುಳಕಿತ ಸಂಜೆಗೆಲ್ಲಾ ಗೊತ್ತಿದೆ ಒಲವಿನ ಭಾವಾಮೃತ ನಿಲ್ಲದೆಯೇ ಸಂಭ್ರಮಿಸುತ್ತಿರಲಿ ಅನವರತ

----------------------------------

Reg ID: BF25-5409

Please Note - You can vote only Once. If you have already voted - the voting will be disabled automatically by the system.

9
Votes
198
Views
11 Months
Since posted

VOTING Closed on Nov 30, 2025!

Scroll to Top