ಹಾಡೋಣ ಬಾ ಗಿಳಿಯೇ
Submitted By: Iranna Ashok Chandargi
----------------------------------
ಭಾವವರಿಯದಾದೆಯಾ ಓ ಗಿಳಿಯೇ ? ಭಾವ ಮನದೊಳುಕ್ಕಿಸಿ ಹಾರ ಹೊರಟೆ ಎಲ್ಲಿಗೆ ? ಭಾವ ಶೃಂಗಾರವಾದಿತೆಂಬ ಭಯವೇ ? ನಿನ್ನ ಹಾಡಿಗೆ ನನ್ನ ಮೈ ಮೇಲೆ ಹೊಸ ರೆಕ್ಕೆ ಪುಕ್ಕಗಳ ಸಂಭ್ರಮ ಉಸಿರು ನಿಲ್ಲುವ ಹಾಗೆ ನಿನ್ನ ಹೆಸರು ಹೇಳಲೇ? ನೀ ಹಾರದ ಹಾಗೆ ಜೋರಾಗಿ ಉಸಿರೆಳೆದು ನಿರ್ವಾತ ಸೃಷ್ಟಿಸಲೇ ? ಹಿತವಾಗಿ ರೆಕ್ಕೆಯೊಂದಾಗಿಸಿ ನೆನೆಯಬಾರದೆ? ನೀ ಕುಣಿಯಬಾರದೆ? ನನ್ನ ಒಂಟಿ ಗೂಡಿನ ಅತಿಥಿ ನೀನಾಗಬಾರದೇ ? ಚಳಿಗೆ ನಡಗುವ ಹಾಡುಗಳ ಸಾಲಿಗೆ ಒಣಗಿದ ಗೂಡಿನ ಕಸಕಡ್ಡಿಗಳು ಚಿಗುರಿವೆ ಹಸಿವಾಗಿರಬಹುದು ಸಿಹಿ ಗೆಣಸು ಹೆಕ್ಕಿ ತಂದು ತಿನಿಸಲೇ ? ಪಂಜರಗಳು ಕಾಯುತಿಹವು ಸೆರೆ ಹಿಡಿಯಲು ನಮ್ಮನು ನನ್ನ ಕೊನೆಯ ಆಸೆ ನಿನ್ನ ಜೊತೆ ಒಂದೇ ಪಂಜರದ ವಾಸ ಬಹುಷ: ಆವಾಗ್ಲಾದ್ರೂ ನನ್ನ ಅನಿವಾರ್ಯತೆ ನಿನಗೆ ಅರ್ಥ ಆಗ್ಬಹುದು...!
----------------------------------
Reg ID: BF25-5383
Please Note - You can vote only Once. If you have already voted - the voting will be disabled automatically by the system.