Submission 2661

ಬದುಕಿನ ಆಧಾರ ಸ್ತಂಭ

Submitted By: ಸೌಭಾಗ್ಯಲಕ್ಷ್ಮೀ ಸಹದೇವಪ್ಪ ಬಂಡಿ

----------------------------------

ಅವ್ವಾ ನಮ್ಗ ಜನ್ಮ ಅಷ್ಟ ಕೊಟ್ಟಕೆಲ್ಲ; ನಮ್ಮೊಳಗಿರ ಭಕ್ತಿಗೂ ಜನ್ಮ ಕೊಟ್ಟಕಿ; ನಮ್ ಒಳ್ಳೆ ಗುಣಗಳಿಗೂ ಜನ್ಮ ಕೊಟ್ಟಕಿ; ನಮ್ ಜನನಕ್ಕ ತನ್ನ ಕರುಳ ಕತ್ತರಿಸಿಕೊಂಡಕಿ; ಮನೆ,ಸಂಸಾರಕ್ಕೆಂದ ತನ್ನ ಜೀವಾನ ಅರ್ಪಿಸಿದಕಿ. ನಮ್ ಜನ್ಮ ಅಕಿಗೆ ಪುನರ್ಜನ್ಮ ತರತೈತಿ; ನಮ್ ಕಣ್ಣೀರ ಅಕಿ ದುಃಖಕ್ಕ ಕಾರಣ ಆಕೇತಿ; ನಮ್ ನಗು ಅಕಿಗೆ ಸುಖಾನ ಕೊಡತೈತಿ; ನಮ್ ಗೆಲವು ಅಕಿಗೆ ಸಂತಸ ನೀಡತೈತಿ; ನಮ್ ಸೋಲು ಅಕಿಗೆ ಅತೃಪ್ತಿ ತರಸ್ತೈತಿ. ಇಡೀ ಜಗತ್ತಿಗೆ ಜನ್ಮ ಕೊಡೋ ದೇವತಿ ಅದಾಳ ಅಕಿ; ಅವ್ಳ ಮನಸಿಗೆ ಗಾಸಿ ಮಾಡಿದ್ರ ನಮ್ ಜೀವ್ನ ಸರ್ವನಾಶ ಆಕೇತಿ; ತನ್ನ ಜೀವ್ನಾನ ನಮ್ಗ ಮುಡಿಪಾಗಿಟ್ಟ ನನ್ನವ್ವಾಗ ಅರ್ಪಿಸ್ತೀನಿ ನನ್ನ ಈ ಪುಟ್ಟ ಕವಿತೆ.❤️

----------------------------------

Reg ID: BF25-5377

Please Note - You can vote only Once. If you have already voted - the voting will be disabled automatically by the system.

33
Votes
233
Views
10 Months
Since posted

VOTING Closed on Nov 30, 2025!

Scroll to Top