Submission 2655

ನನ್ನವ್ವ

Submitted By: Saraswati N Hulamani

----------------------------------

ನನ್ನವ್ವ ಉಸಿರು ಕೊಟ್ಟ ಜನ್ಮದಾತೆ ನನ್ನುಸಿರೊಳು ಉಸಿರಾಗಿಹ ದೇವತೆ ಪ್ರೀತಿಯ ಕಡಲು, ಮಮತೆಯ ಒಡಲು ಕಂಡಿಲ್ಲ ಇವಳು ಅಪ್ಪನ ಹೆಗಲು, ಅಮ್ಮನ ಮಡಿಲು ತಾಯಿಯ ಪದವಿ ಇವಳದಂತೆ ಆದರೂ ನನಗೆ ಇವಳು ಮಗುವಂತೆ ಮುಳ್ಳಿನ ಹಾದಿಯಲ್ಲಿ ನಡೆದು ಬಂದ ಸಹಾನುಭೂತಿ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಗರತಿ ಜೀವನದುದ್ದಕ್ಕೂ ಎದುರಾದ ಕಷ್ಟಗಳು ಅಪಾರ ನನ್ನವ್ವ ಎಷ್ಟೇ ಬಿಸಿ ತಾಗಿದರೂ ಕರಗದ ಬಂಗಾರ ನನಗಿವಳೇ ಸ್ಫೂರ್ತಿಯ ಚಿಲುಮೆ ಕನಸಿನ ಒಲುಮೆ ಓ ಜನನಿ! ನೀನು ಹಾಡಿದರೂ ಮುಗಿಯದ ಕವಿತೆ ಓದಿದರೂ ಅರಿಯದ ದಂತಕಥೆ

----------------------------------

Reg ID: BF25-5374

Please Note - You can vote only Once. If you have already voted - the voting will be disabled automatically by the system.

21
Votes
230
Views
11 Months
Since posted

VOTING Closed on Nov 30, 2025!

Scroll to Top