Submission 2631

ಸವಿಗನ್ನಡ

Submitted By: Krishnamurthy Seetharama

----------------------------------

ಕಿವಿಯ ತಲುಪಲು ಮಧುರ ಕನ್ನಡದ ಇಂಪು, ಮೈಮನದ ತುಂಬೆಲ್ಲ ಕೊಡಗಿನದೆ ತಂಪು! ಲಿಪಿ ಚೆಂದ, ಧ್ವನಿ ಅಂದ ಸಂಗೀತದಂತೆ, ಒಂದೊಂದು ಅಕ್ಷರವು ಬಿರಿದ ಮಲ್ಲಿಗೆಯಂತೆ. ಪೋಣಿಸಿ ತಂದರೆ ಕನ್ನಡದ ಮಲ್ಲಿಗೆಯ ಮಾಲೆ, ಇಳಿದು ಬರಳೇನು ಒಲಿದು ಬೇಲೂರ ಬಾಲೆ? ನಾಲಿಗೆಯು ತಿರುಗಿದರೆ ಕನ್ನಡದ ದಾರಿಯಲಿ, ಕಣ್ಣುಗಳು ಮೆರೆಯುವವು ಬೇಲೂರಿನಲ್ಲಿ, ದಾಸರಾ ಪದಗಳು ಮೊಳಗುವವು ಕಿವಿಯಲ್ಲಿ, ಮನವು ಮೈಮರೆಯುವುದು ಬನವಾಸಿಯಲ್ಲಿ. ಕಬ್ಬಿಣದ ಕಡಲೆಯಲ್ಲವಿದು ಸವಿ ಬೆಂದ ಕಾಳು, ತಿಂದು ಬಾಯ ಚಪ್ಪರಿಸದಿದ್ದರೆ ಆಗ ಕೇಳು! ಸುತ್ತಿ ಬಂದರೆ ಒಮ್ಮೆ ನಮ್ಮ ಕನ್ನಡದ ನಾಡು, ಎದೆಯಲ್ಲಿ ಚಿಮ್ಮುವುದು ನೂರೆಂಟು ಹಾಡು!

----------------------------------

Reg ID: BF25-5362

Please Note - You can vote only Once. If you have already voted - the voting will be disabled automatically by the system.

35
Votes
277
Views
10 Months
Since posted

VOTING Closed on Nov 30, 2025!

Scroll to Top