ಸೌಜನ್ಯದ ಸಾಪಲ್ಯ
Submitted By: DURADUNDI GAVANI
----------------------------------
ಪ್ರೇಮ ಅಮೃತ ಗಳಿಗೆಯ ಬಂಧನ ಸಾವು ವಿಷಮ ಕಾಲದ ಬಿಳ್ಕೋಡುಗೆ ಪ್ರೇಮದ ಸಾವು ಆಕಸ್ಮಿಕ ಮೌನದಡುಗೆ ಸಾವಿನ ಪ್ರೇಮ ಪರಿಮಳದ ಚಂದನ ಲೋಕಾನುಭವ ಭಾಗ್ಯ ತೆರೆದ ಕುಸುಮ ಅಪ್ರಜ್ಞೆಯ ಕುಲುಮೆ ಪುಟೆದೆದ್ದ ಒಲವು ಮಂದಾರ ಮೋಡಿ ಮನ್ಮೋಹಕ ಚೆಲವು ನಂದನ ವನದ ಮಂದಸ್ಮಿತ ಬೀರಿದ ಸುಮ ಅಕ್ಷಿಯ ನೋಟಕೆ ಪಕ್ಷಿ ಹಾರುವ ಮಾಟ ಮಲಯ ಮಾರುತದಾಚೆ ಮನದ ಮುದ ಬಾನಿನಂಗಳದ ಹೇಮ ಹಕ್ಕಿಯ ಮದ ಜೀವ ಜಗದ ವಿಸ್ಮಯ ಆತ್ಮಗಳ ಕೂಟ ಪ್ರೇಮ ಸಲ್ಲಾಪದ ಸೃಷ್ಟಿಸಿದ ವೈಪಲ್ಯ ಸಾವು ಸಂಸ್ಕಾರ ಸೌಜನ್ಯದ ಸಾಫಲ್ಯ!
----------------------------------
Reg ID: BF25-5300
Please Note - You can vote only Once. If you have already voted - the voting will be disabled automatically by the system.