Submission 2464

ಮಸಣದೆಡೆಗೆ

Submitted By: Shivayya Charantimath

----------------------------------

ಮಟಮಟ ಮಧ್ಯಾಹ್ನದಾಗ, ಕಾದ ಹಂಚಾದ ರಸ್ತೆ ಮೇಲೆ "ಅವ್ವಾ, ಅಪ್ಪಾ, ಶಿವಪ್ಪಾ", ಅಂತ ನಾಯಿಯಂಗ ಜೊಲ್ಲು ಸುರಿಸುತ್ತಿದ್ದ. "ಮುಂದೆ ಹೋಗ್, ನಡಿ "ಅಂತಿದ್ದರು ಜನ. ಹಿಂದೊಮ್ಮೆ ಭೇಟಿಯಾದಾಗ, ಕರಿ ಮಂಗ್ಯಾನಂಗ ಕಣ್ ಪಿಳಿಪಿಳಿ ಬಿಡುತ್ತಿದ್ದ." ಹಮಾಲಿ "ಅಂದ ಕೂಡಲೆ ಗಂಟು ಹೊರುತ್ತಿದ್ದ,ಮುಗ್ಗುರಿಸುತ್ತಿದ್ದ. ಹತ್ತುರೂಪಾಯಿ ಕೊಟ್ಟರೆ ಹೋಗಿಬಿಡುತ್ತಿದ್ದ. ಮತ್ತೊಮ್ಮೆ ಭೇಟಿಯಾದಾಗ, ರುಂಡ, ಮುಂಡ, ತುಂಡು ತುಂಡು ಮಾಡಿ ಚುಚ್ಚಿ ಚುಚ್ಚಿ ತಿನ್ನುತ್ತಿದ್ದವು ಹದ್ದುಕಾಗೆಗಳು. ಇರುವೆ, ನೊಣದ ಗುಂಪಿನೊಳಗ ಹೆಣದ ಜೀವ ತೇಲಿ ತೇಲಿ ಹೋಗುತ್ತಿತ್ತು.

----------------------------------

Reg ID: BF25-5276

Please Note - You can vote only Once. If you have already voted - the voting will be disabled automatically by the system.

110
Votes
811
Views
1 Year
Since posted

VOTING Closed on Nov 30, 2025!

Scroll to Top