Submission 2462

ಕತ್ತಲು

Submitted By: Vanajakshi P Chembrakana

----------------------------------

ಕಾರಿರುಳ ಅಸಮಯವದು ಒಡಲಾಳದಲೇಕೋ ನಡುಕ ಆಗಾಗ ಬಂದು ಹೋಗುವ ಬಸ್ಸುಗಳು ಓಡೋಡಿ ಹತ್ತುವ ಜನಮಂದೆ ಇರುಳೇರಿದಂತೆ ಸೇರಿಹರೆಲ್ಲಾ ಗಮ್ಯ! ನಿಲ್ದಾಣದಲೀಗ ಗಾಢ ಮೌನ! ಕಾಮಾಂಧ ದುರುಳರಿಗೆ ಹಸುಳೆಯೋ ಬುದ್ಧಿಮಾಂದ್ಯರೋ ಕೀವಿಳಿವ ಗಾಯವೋ ಹಗಲೆಲ್ಲಾ ಓಡಾಡಿ ಛೀ! ಥೂ! ಅನ್ನಿಸಿ ಚುರುಗುಟ್ಟುವ ಹೊಟ್ಟೆಯಲಿ ನಿದ್ದೆಯಾಳಕಿಳಿವ ಸಮಯ! ದೂರದಲಿ ಬೀದಿನಾಯಿಗಳ ಅರಚಾಟ! ಗಾಢನಿದ್ರೆಯಲಿ ಮುಗ್ಧ ಜೀವ! ತನ್ನೊಡಲ ನೋವ ಮರೆತು ಬೀರುತಲಿದೆ ಮಂದಹಾಸ! ತೂತಾದ ಆಗಸದಲಿ ಕರ್ಕಶ ಅಟ್ಟಹಾಸ! ಕತ್ತಲಲಿ ಕ್ರೂರತೆಯ ನರ್ತನ! ಬಡಕಲು ದೇಹದ ಕೊನೆಯ ಆಕ್ರಂದನ!

----------------------------------

Reg ID: BF25-5275

Please Note - You can vote only Once. If you have already voted - the voting will be disabled automatically by the system.

49
Votes
303
Views
10 Months
Since posted

VOTING Closed on Nov 30, 2025!

Scroll to Top