Submission 2448

ನನ್ನ ಅಪರಂಜಿ ಕನ್ನಡ

Submitted By: PAVANKUMAR M S

----------------------------------

ಉಸಿರಲಿ ಮನಸಲಿ ಬೆಳೆಯಲಿ ಕನ್ನಡ. ಜಗದಲಿ ಮನದಲಿ ಮೊಳಗಲಿ ಕನ್ನಡ. ವಿಧ ವಿಧ ನುಡಿಯಲ್ಲಿ ಪಟ ಪಟ ಮಾತಲಿ ಜೊತೆ ಜೊತೆ ಮೂಡಲಿ ನಮ್ಮಯ ಕನ್ನಡ. ಕಲಿಯುತ ನಲಿಯುತ ಬೆಳೆಯಲಿ ಕನ್ನಡ.|| ವಿಶ್ವಕೆ ಸುಂದರಿ ನಮ್ ಕನ್ನಡ ರಾಣಿ. ಹುಲಿಗಳ ಜನನಕೆ ಮಡಿಲಿನ ತಾಯಿ. ಹೃದಯಕು ಪ್ರೀತಿಗೂ ನಲ್ಮೆಯ ತಾಣ. ಮಗುವಿನ ಮನಸಿಗೂ ನಾಟುವ ಕನ್ನಡ. ಕಲಿಯುತ ನಲಿಯುತ ಬೆಳೆಯಲಿ ಕನ್ನಡ.|| ನಾಡಿನ ಕಣ ಮಣ್ಣಲಿ ಬೆಳೆಯಲಿ ಕನ್ನಡ. ನುಡಿ ನುಡಿಯುತ ಮೊಳಗಲಿ ಕನ್ನಡ ಅಂದದ ಚಂದದ ನುಡಿ ಪದಗಳ ಕನ್ನಡ. ಎಂದು ಬಾಡದ ಹೂ; ನಮ್ ಕನ್ನಡ.. ಕಲಿಯುತ ನಲಿಯುತ ಬೆಳೆಯಲಿ ಕನ್ನಡ.||

----------------------------------

Reg ID: BF25-5267

Please Note - You can vote only Once. If you have already voted - the voting will be disabled automatically by the system.

0
Votes
109
Views
10 Months
Since posted

VOTING Closed on Nov 30, 2025!

Scroll to Top