ಪ್ರೇಮ ಜೋಳಿಗೆ
Submitted By: B S Pradeep
----------------------------------
ಮುದಗೊಳಿಸೊ ಜೋರುಮಳೆ ನೀನು ಚಾಚಿರುವ ಬೊಗಸೆ ಅಂಗೈ ತುಂಬಿಸಿಬಿಡು ಆಕಾಶದ ತುಂಬೆಲ್ಲಾ ಅರಳಿದ ಪ್ರೇಮ ನಕ್ಷತ್ರಗಳ ಒಡತಿ ನೀನು ಒಂದೇ ಒಂದು ತಾರೆಗೆ ಕೈಚಾಚಿದ ಹುಡುಗ ನಾ ನಿನ್ನ ಹೃದಯ ಪ್ರೀತಿ ಭಾವನೆಗಳ ಬಂಗಲೆ ಅದರ ಮುಂದೆ ಖಾಲಿ ಹೃದಯದಿ ಕೈ ಯೊಡ್ಡಿರುವೆ ಕನಸ್ಸುಗಳ ಫಸಲು ತುಂಬಿದ ಕಣಜ ಆ ಕಣ್ಣುಗಳು ಜೋಳಿಗೆ ಹಿಡಿದಿರುವೆ ನಿನ್ನದೇ ಮೊದಲ ಮನೆ ನನ್ನಲ್ಲೂ ಇದೇ ಪುಟ್ಟ ಪ್ರೇಮ ಕವಿತೆ ಸೇರಿಸಿಕೊಳ್ಳುವೆಯ ನಿನ್ನ ಹೃದಯದ ಕಾವ್ಯ ಸಂಕಲನದೊಳಗೆ
----------------------------------
Reg ID: BF25-5230
Please Note - You can vote only Once. If you have already voted - the voting will be disabled automatically by the system.