Submission 2179

ತುಂಬಾ ಉದಾರಿ ನಾನು

Submitted By: Chandrakant G Chavhan

----------------------------------

ಬದುಕಿದ್ದೇನೆ ಇನ್ನು ನಾನು ಕೊಲ್ಲಲು ಬಂದು ಹೆಣವಾದವರ ದೇಹ ದಫನ್ ಮಾಡಲು! ಪ್ರೀತಿ ಉಳಿಸಿಕೊಂಡಿದ್ದೇನೆ ನಾನು ಪ್ರೀತಿ ಕಿತ್ತುಕೊಳ್ಳಲು ಬಂದು ಅನಾಥರಾದವರಿಗೆ ಪ್ರೀತಿಯಿಂದ ಪೊರೆಯಲು! ಕಣ್ಣು ತೆರೆದಿದ್ದೇನೆ ಇನ್ನು ನಾನು ಸತ್ಯಕ್ಕೆ ಮಣ್ಣೆರಚಿ ಕಣ್ಣು ಕಳೆದುಕೊಂಡವರ ಕಣ್ಣ ದೃಷ್ಟಿ ಆಗಲು! ದೀಪದ ಬೆಳಕಲ್ಲಿದ್ದೇನೆ ಇನ್ನು ನಾನು ಸತ್ಯ ನ್ಯಾಯವನ್ನು ಕೊಂದು ಬೆತ್ತಲಾದವರಿಗೆ ಮರ್ಯಾದೆಯ ಕತ್ತಲಾವರಿಸಲು! ಇನ್ನೂ ಹೋರಾಡುತ್ತಲೇ ಇದ್ದೇನೆ ನಾನು ಒಳ ನುಸುಳಿ ನನ್ನತನವ ಕೊಳ್ಳೆ ಹೊಡೆದವರ ನಿಜ ಬಣ್ಣ ಬಯಲು ಮಾಡಲು!

----------------------------------

Reg ID: BF25-5199

Please Note - You can vote only Once. If you have already voted - the voting will be disabled automatically by the system.

4
Votes
150
Views
10 Months
Since posted

VOTING Closed on Nov 30, 2025!

Scroll to Top