ಪ್ರೀತಿಯಿರಲಿ
Submitted By: Bhavya L
----------------------------------
ಭುವಿಯ ಮೇಗಡೆ ಜೀತಕೆ ಬಂದವರು ನಾವು ಮಾಲೀಕನಿರುವ ಎಚ್ಚರಿಕೆ ಮರೆಯದಿರಿ ನೀವು ಜ್ಞಾನ-ವಿಜ್ಞಾನವದು ಶೂನ್ಯ ಘನಮಹಿಮನ ಮುಂದೆ ಕಣ್ಣಿಗೆ ಕಾಣದವ ಧರೆಯ ನಡೆಸಿದಂತಿದೆ ಕೂಲಿ ಬರುವುದು ಸಮಯಕ್ಕೆ ಸರಿಯಾಗಿ ತಪ್ಪದವನ ಲೆಕ್ಕ ಸುಖ-ದುಖಕ್ಕೆ ಅಣಿಯಾಗಿ ಬಂದ ಕೆಲಸ ಮುಗಿಸುತಲೆ ತೊಲಗಬೇಕು ಮಾಲೀಕ ಹೊಸ ಮುಖವನೆ ತರಬೇಕು ರಾಜ ಭೋಜರಿಗೂ ಸಾವಿಗೆ ರಿಯಾಯಿತಿಯಿಲ್ಲ ಇರುವಾಗ ಪ್ರೀತಿಯಿರಲಿ ಸಕಲ ಸೃಷ್ಟಿಯೊಳಗೆಲ್ಲ
----------------------------------
Reg ID: BF25-5180
Please Note - You can vote only Once. If you have already voted - the voting will be disabled automatically by the system.