Submission 2151

ನೆನಪುಗಳು

Submitted By: ನಾಗರಾಜ ಜಿ. ಎನ್. ಬಾಡ

----------------------------------

ಅಳಿದು ಹೋಗುವ ಬದುಕಿನಲ್ಲಿ ಉಳಿದು ಹೋಗುವುದು ನೆನಪು ಕಾಡುವ ಸವಿ ನೆನಪುಗಳ ಜೊತೆಗೆ ಸಾಗುತ್ತಲೇ ಇರುವುದು ನೆನಪು ಸುರಿಯುವ ಮಳೆಯಂತೆ ಸುರಿದು ಮನದ ತುಂಬ ಬಿಡಿಸುವುದು ಚಿತ್ತಾರ ಕಣ್ಮನವ ನಿತ್ಯ ಸೂರೆಗೊಳ್ಳುವುದು ತೋರುವುದು ಹೊಸ ಹೊಸ ಅವತಾರ ಮಳೆಯ ಸ್ಪರ್ಶಕ್ಕೆ ಹಸಿರು ಚಿಗುರಿ ಭುವಿಯ ಮೈ ಹಸಿ ಹಸಿರುಗೊಳಿಸಿದೆ ಬಿರು ಬಿಸಿಲಿನ ಬೇಗೆಯನ್ನು ತಣಿಸಿ ಖುಷಿಯ ಚಿಲುಮೆಯ ಚಿಮ್ಮಿಸಿದೆ ಕಾಡದಿರಲಿ ನೆನಪುಗಳು ಚಿಂತೆಯಾಗಿ ಉಳಿದು ಹೋಗಲಿ ಭಾವನೆಯ ಬೆಳಕಾಗಿ ಭರವಸೆಯ ನಾಳೆಗಳ ಜೊತೆಯಾಗಿ ಬಾಳ ದಾರಿಯ ನಲ್ಮೆಯ ಚಿಲುಮೆಯಾಗಿ ಸರಿ ತಪ್ಪುಗಳ ಸರಿಯಾಗಿ ಯೋಚಿಸುತ್ತ ಹೆಜ್ಜೆ ಮುಂದಿಡಲು ತಲುಪುವುದು ಗುರಿ ನಾವು ಹಿಂದೆ ಮಾಡಿದ ಪಾಪ ಕರ್ಮಗಳೇ ನೆನಪುಗಳ ನೆರಳಾಗಿ ಕಾಡುವುದು ನೀನರಿ

----------------------------------

Reg ID: BF25-5176

Please Note - You can vote only Once. If you have already voted - the voting will be disabled automatically by the system.

0
Votes
113
Views
10 Months
Since posted

VOTING Closed on Nov 30, 2025!

Scroll to Top