ಓ ಕನಸಿನ ಮನಸೇ
Submitted By: ಮೌನೇಶ. ಜೆಕೆ. ಕರಕಿಹಳ್ಳಿ
----------------------------------
ಓ ನನ್ನ ಕನಸಿನ ಮನಸೇ ನನ್ನ ಒಮ್ಮೆ ನೀನು ಕ್ಷಮಿಸೇ! ಚೂರೇ ಚೂರು ಪ್ರೀತಿಯ ಕರುಣಿಸೇ!! ನನ್ನ ಪ್ರೀತಿ ಕೂಗಿಗೆ ನೀ ಧ್ವನಿ ಗೂಡಿಸೇ ನಿನ್ನಲ್ಲಿ ಬೇಡುವೆ ನನ್ನನು ಪ್ರೀತಿಸೇ! ಇಬ್ಬರಲ್ಲಿ ಪ್ರೀತಿ ಹುಟ್ಟಿದೆ ನೀ ಸಹಕರಿಸೇ ನನ್ನ ಮೇಲೆ ಸ್ವಲ್ಪ ದಯೇ ತೋರಿಸೇ!! ನಿನ್ನ ಪ್ರೀತಿ ಪ್ರೇಮವನು ನನಗೆ ಉಣಿಸೇ ಮಲ್ಲಿಗೆ ಹೂವಂತೆ ನನ್ನನು ನೀ ಅರಳಿಸೇ! ನಿನ್ನ ಮುದ್ದು ನಗುವಲ್ಲಿ ನನ್ನನು ನಗಿಸೇ ಮಗುವಿನಂತ ಮಾತು ನನ್ನನ್ನು ಕನಿಕರಿಸೇ!! ಈ ಹೃದಯ ಗೂಡಲ್ಲಿ ನಿನ್ನ ಬಚ್ಚಿಡುವ ಆಸೆ ನನ್ನ ತೋಳಲ್ಲಿ ನಿನ್ನ ಬಂಧಿಸುವ ಕನಸೇ! ಕ್ಷಣ ಬಿಟ್ಟಿರಲಾರೆ ನನ್ನ ಪ್ರೀತಿಗೆ ಸಮ್ಮತಿಸೇ ನಿನ್ನ ನೆನಪಲ್ಲಿ ನಾನು ಬದುಕಿನ ದೋಣಿ ಸಾಗಿಸೇ!!
----------------------------------
Reg ID: BF25-5179
Please Note - You can vote only Once. If you have already voted - the voting will be disabled automatically by the system.