ನಿನ್ನೆಯ ಇಂದಿನ ನಾಳೆಗಳು
Submitted By: K. N. Satish
----------------------------------
ನಮ್ಮ ಹತ್ತು ಹಲವಾರು ಗೋಲಾಕಾರ ವೃತ್ತಗಳು, ಎಲ್ಲಾ ಜೀವರಾಶಿಗಳು ಅದೆಷ್ಟೋ ವೃತ್ತಗಳಲ್ಲಿ ಮುಂದೆ ಹಿಂದೆ ಬೇಕು ಬೇಡಗಳ ವಿಚಾರಿಸುತ್ತಾ ಸಾಗುವರು ಒಂದು ನಿಯತಿಯಿಂದ. ಬೆಳಿಗ್ಗೆ, ಸಂಜೆ ರಾತ್ರಿಯೊಂದಿಗೆ ಚಳಿ ಮಳೆ ಬಿಸಿಲು ವಸಂತಗಳೊಂದಿಗೆ, ನಮ್ಮವರೊಂದಿಗೆ ನಮ್ಮದಲ್ಲದವರೊಂದಿಗೆ, ದಾರಿ ಮಾತ್ರ ಒಂದೆ. ಆಚೆಯೂ ಈಚೆಯೂ ಅದರೊಳಗೆ ಹತ್ತು ಹಲವಾರು. ಗಿಡವು ಚಿಗುರಿ ಹೂಬಿಟ್ಟು ಮರವಾಗುವುದು, ಮತ್ತೆ ಜಡವಾಗಿ ಉದುರಿ ಚಿಗುರುವುದು ಕೂಡಾ, ಅದರಂತೆ ಸುತ್ತಿ ಮುನ್ನಡೆಯುವೆವು. ಹಿಂದಿನದು ನೆನಪಿದ್ದರೆ ಇರಬಹುದು, ಇರದಿರುವುದೇ ಹೆಚ್ಚು. ಮತ್ತೆ ಬಂದು ಹೋಗುವ ನಿನ್ನೆ ಮೊನ್ನೆಯ ಇಂದು ನಾಳೆಗಳು.
----------------------------------
Reg ID: BF25-5170
Please Note - You can vote only Once. If you have already voted - the voting will be disabled automatically by the system.