Submission 2043

ಕಮರಿತು ಕನಸು

Submitted By: Pooja Haralayya Naduvinmani

----------------------------------

ಚಿಗುರುವ ಮುನ್ನವೇ ಕಮರಿತೆ ಕನಸು ರೋಧಿಸಲು ಬಲ ವಿಲ್ಲದಂತೆ ಕುಗ್ಗಿತೆ ಮನಸು ಸಪ್ತಪದಿ ತುಳಿದ ಹೆಜ್ಜೆ ತಪ್ಪಿತು ಮನ್ನಿಸು ಕೊಟ್ಟ ಮಾತಿದು ಮಾಸಿತು ನನ್ನ ಕ್ಷಮಿಸು. ಹೊಸ್ತಿಲಲ್ಲಿ ಹಚ್ಚಬೇಕಿದ್ದ ಹೊಸತನದ ದೀಪ ಪಡೆದುಕೊಂಡಿತು ಮರಣದ ಪ್ರತಿರೂಪ ನಿನ್ನ ಬಲಿಯಾಯಿತೇಕೆ ಯಾರದೋ ಮೇಲಿನ ಕೋಪ ಪಾತಕಿಗಳರಿವರೇ ನನ್ನ ಮನದಿ ಕುದಿಯುತಿಹ ತಾಪ ಭವಿಷ್ಯದ ಸಾವಿರಾರು ಆಸೆಗಳ ಹೊತ್ತು ಆಸೆಯಲ್ಲ ಭವಿಷ್ಯವೇ ಹೋಯಿತು ಸತ್ತು ಬರುವ ಗುಂಡದೋ ಹೋಳಾಗಿ ನನಗೂ ತಾಕಬೇಕಿತ್ತು ನಗುತಿಹುದೇನೋ ವಿಧಿ ನನ್ನ ಕೊರಳ ಮಾಂಗಲ್ಯವ ಕಿತ್ತು ಬರಿದಾಯಿತೇನು ನನ್ನ ಬದುಕು ಮರುಭೂಮಿಯಂತೆ ಹರಿಯಿತು ನೀರಾಗಿ ಬಾಳು ಮಂಜುಗಡ್ಡೆಯಂತೆ ಕ್ಷಣಾರ್ಧದಲ್ಲೇ ಎಲ್ಲವು ಮಾಯವಾಯ್ತು ಬರಸಿಡಿಲು ಬಡಿದಂತೆ ಹಕ್ಕಿಗೆ ಆಸರಾಗಿದ್ದ ಮರದ ಆ ಕೊಂಬೆಯ ಕಡಿದಂತೆ ದೇವರೇ ನಾನೆಂದು ಕ್ಷಮಿಸಲಾರೆ ಈ ಕ್ರೂರ ರೀತಿಯ ಧರ್ಮದ ಹೆಸರಲ್ಲೇ ಕೊಂದರು ನಮ್ಮ ಪ್ರೀತಿಯ ಶರಣಾಗತಿಯಾಗುವೆನು ಕೊಡಬಲ್ಲಿರಾ ನನ್ನ ಪತಿಯ ರಕ್ತದೋಕುಳಿ ಹರಿಸಿ ಮುಚ್ಚೆ ಬಿಟ್ಟಿರಿ ನಾವು ಸಾಗುವ ದಾರಿಯ ನಿನ್ನ ಸಾವಿನ ಪ್ರತೀಕಾರಕ್ಕಾಗಿ ಮೇಲೇಳಲೆ ? ನಿನ್ನ ಶಾಶ್ವತ ಮೌನವ ನೋಡಿ ಕುಸಿದು ಬೀಳಲೇ? ಇತಿಹಾಸದಿ ಕಥೆಯಾಗಲು ದಿಟ್ಟತನದಿ ಮುನ್ನಡೆಯಲೇ? ಇಲ್ಲವೇ. ನಿನ್ನ ಎದೆ ಗವಚ್ಚಿಕೊಂಡೊಮ್ಮೆ ನಾನು ಕೊನೆಯುಸಿರ ಎಳೆದುಬಿಡಲೇ!

----------------------------------

Reg ID: BF25-5159

Please Note - You can vote only Once. If you have already voted - the voting will be disabled automatically by the system.

0
Votes
104
Views
11 Months
Since posted

VOTING Closed on Nov 30, 2025!

Scroll to Top