Submission 2041

ಮೂಕ ಮನಸಿನ ಧ್ವನಿ

Submitted By: Basavesha S

----------------------------------

ಕಣ್ಣಿಲ್ಲದ ಕುರುಡ ನಾ ಬಂದಿತೇಕೆ ಕಂಬನಿ ಕಿವಿಕೇಳದ ಕಿವುಡನಿಗೆ ಕೇಳಿತೇಕೆ ಮೌನ ಧ್ವನಿ ಮೂಕನಾಗಿರುವವನಿಗೆ ಮನ ಮಾತಾಡಿತು ಪ್ರಪಂಚ ಕೇವಲವಾಗಿ ನನ್ನ ನೋಡಿದ್ದರಲ್ಲ ಕನಿಕರವಿಲ್ಲದೆ ದೂರ ತಳ್ಳಿದ್ದಾರಲ್ಲ ಹಸಿದ ಹೊಟ್ಟೆಗೆ ತುತ್ತು ಅನ್ನ ಸಿಗಲಿಲ್ಲ ಇನ್ನು ಉಳಿದಿದೆ ಜೀವ ಯಾಕೋ ಗೊತ್ತಿಲ್ಲ ಮೂಕ ಮನಸಿನ ಧ್ವನಿ ಯಾರಿಗೂ ಕೇಳಲ್ಲ ಕಣ್ಣೆತ್ತು ಸಹ ನನ್ನ ಒಬ್ಬರು ನೋಡಲಿಲ್ಲ ತಲೆ ಸವರಿ ತುಸು ನುಡಿ ಸಹ ನುಡಿಯಲಿಲ್ಲ ಅಂಗವೈಖ್ಯಲತೆ ನನ್ನಲ್ಲಿ ಮಾತ್ರವಿಲ್ಲ ನನ್ನ ಬದುಕು ಏಕಾಂಗಿ ಖಂಡಿತ ನಾನಲ್ಲ ನನ್ನ ಮನದೊಳಗೆ. ಒಂದು ಪ್ರಪಂಚವಿದೆ ಅದರೊಳಗೆ ನಾ ಬದುಕಿರುವೆ ಅಚ್ಚರಿ ಏನಿಲ್ಲ

----------------------------------

Reg ID: BF25-5155

Please Note - You can vote only Once. If you have already voted - the voting will be disabled automatically by the system.

0
Votes
104
Views
11 Months
Since posted

VOTING Closed on Nov 30, 2025!

Scroll to Top