Submission 2007

ಕಾಯುತಿಹಳು ಸೀತೆ

Submitted By: ಸವಿತಾ ಸತೀಶ್ ಶೆಟ್ಟಿ

----------------------------------

ಅಶೋಕ ವನದಲ್ಲಿರುವ ತೊರೆಯ ದಡದಲ್ಲಿ ಕುಳಿತು ಮನದ ರಾಜ ಶ್ರೀ ರಾಮನಿಗಾಗಿ ಕಾಯುತಿಹಳು ಸೀತೆ ಮಾತೆಯ ಕಣ್ಣೀರ ಶೋಕಕ್ಕೆ ಪ್ರಕೃತಿ ಮೌನವಾಯ್ತು ಪ್ರತಿ ಕ್ಷಣವು ಶ್ರೀ ರಮಣನ ಧ್ಯಾನಿಸುತ್ತಿರುವಳು ದಾತೆ ರಾವಣನಿಗೆ ರೋಧಿಸಿ ಶಪಿಸುತ್ತಿರುವಳು ಮೈಥಿಲಿ ಶ್ರೀ ರಾಮಚಂದ್ರನ ಹೃದಯದಲ್ಲಿ ನೆನೆಯುತ ಗಾಢವಾದ ದುಃಖದಲ್ಲಿ ಮುಳುಗುತಲಿ ತನ್ನನ್ನೇ ಮರೆತು ಕಲ್ಲಾಗಿಹಳು ರಾಮಸತಿ ಭೂಮಿಜೆಯ ಶೋಕ ನೋಡಿ ಕರಗಿದ ಹನುಮನು ಶ್ರೀಲಂಕೆಯನ್ನೆಲ್ಲಾ ಸರ್ರನೆ ದಹಿಸಿದನು ಕ್ಷಣದಲಿ ಸತ್ಯಮಾತೆಗೆ ಕೊಟ್ಟ ವಿಶ್ವಾಸ ಭರವಸೆಯನು ದೇವಿ ನಿರತಳಾದಳು ರಘುನಂದನನ ನಿರೀಕ್ಷೆಯಲಿ

----------------------------------

Reg ID: BF25-5150

Please Note - You can vote only Once. If you have already voted - the voting will be disabled automatically by the system.

0
Votes
106
Views
11 Months
Since posted

VOTING Closed on Nov 30, 2025!

Scroll to Top