Submission 1933

ಸಾಧಕನಾಗು

Submitted By: muttu y waddar

----------------------------------

ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕು ತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕು ಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕು ನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ ಬದುಕು ಬೇಜಾರು ಆಲಸ್ಯತನ ದೂರಕ್ಕೆ ನೂಕು ಸಾಧಕರ ಸಾಧನೆಗಳ ಮೆಲುಕು ಹಾಕು ಕರುನಾಡೆ ಒಂದು ದಿನ ನಮ್ಮನ್ನು ಓದಬೇಕು ಕುಂಟು ನೆಪಗಳೊಂದಿಗೆ ಕಾಲ ಕಳೆಯಬೇಡಿ ಸುಮ್ಮನೆ ಅನಾಗತ್ಯವಾಗಿ ಸಮಯ ವ್ಯರ್ಥ ಮಾಡಿ ಕಳೆದು ಹೋದ ದಿನಗಳ ಕುರಿತು ಚಿಂತಿಸಬೇಡಿ ಪ್ರಯತ್ನಗಳಲ್ಲಿ ಸೋತಿದ್ದೀರಿ ಆದರೆ ಸತ್ತಿಲ್ಲ ನೆನಪಿಡಿ ಇರುವುದೊಂದೇ ಜನ್ಮ ಪರಿಶ್ರಮ ಹೆಚ್ಚಾಗಲಿ ನೀವ್ಯಾರು ಎಂಬುದು ಜಗತ್ತಿಗೆ ತಿಳಿಯಲಿ ಸತ್ತ ಮೇಲೆ ಸ್ಮಶಾನ ಕಣ್ಣೀರಿಡುವಂತಾಗಲಿ ಮಾಡಿದ ಸಾಧನೆ ಚರಿತ್ರೆಯಲ್ಲಿ ಉಳಿಯಬೇಕಾಗಿದೆ ಆ ಮಹಾನ್ ಕಾರ್ಯಕ್ಕೆ ತಪಸ್ಸು ಬೇಕಾಗಿದೆ ಹೆತ್ತವರ ಒಡಲು ಸಂತಸದಿ ಇರಿಸಬೇಕಾಗಿದೆ ಸಾಧಕರಾಗಿ ಸನ್ಮಾನ ಸಮಾರಂಭಕ್ಕೆ ವೇದಿಕೆ ಸಜ್ಜಾಗಿದೆ

----------------------------------

Reg ID: BF25-5137

Please Note - You can vote only Once. If you have already voted - the voting will be disabled automatically by the system.

0
Votes
106
Views
10 Months
Since posted

VOTING Closed on Nov 30, 2025!

Scroll to Top