Submission 1895

ಸುಮ್ಮನಲ್ಲ ಕೇಳು ಗೆಳತಿ.

Submitted By: ಹೊಳಬಸು ಎಮ್. ಪತ್ತಾರ

----------------------------------

ಸುಮ್ಮನೇಕೆ ಅಲೆಯುವೆ, ಕಾಲಿಲ್ಲದ ಮನವೇ? ತೊಟ್ಟುಕೊಂಡಾಳೇನು? ಅವಳು ನೀ ಕೊಟ್ಟ ಒಲವೆಂಬ ಒಡವೆ! ಸುಮ್ಮನೇಕೆ ಬರೆಯುವೆ, ಹೇಳಲಾಗದ ಮನವೇ, ಬಿಟ್ಟುಕೊಂಡಾಳೇನು? ಅವಳು ನಿನ್ನ ಪದ್ಯಕ್ಕೆ ಒಲವೆಂಬ ಇರುವೆ! ಸುಮ್ಮನೇಕೆ ಹೆಣೆಯುವೆ, ಕನಸನ್ನ ಮನವೇ, ಇಟ್ಟುಕೊಂಡಾಳೇನು? ಅವಳು ನಿನ್ನ ನೆನೆದು ಒಲವೆಂಬ ಮೊಡವೆ! ಸುಮ್ಮನಲ್ಲ ಕೇಳು ಗೆಳತಿ, ನಿನ್ನ ಹೊರತು ಬೇರೆಲ್ಲೂ ಅಡವಿಡುವುದಿಲ್ಲ, ನನ್ನ ಒಲವ ಒಡವೆ. ಬರೀ ಛಂದದ ಇರುವೆ ಅಲ್ಲ, ನಿನ್ನ ಪ್ರತಿ ಹೆಜ್ಜೆಗೂ ಜೊತೆ ನಾನಿರುವೆ. ನೀ ಇರಿಸಿದರೆ ಸಾಕು ಮೊಡವೆ, ನಾನಗುವೆ ನಿನ್ನಿಷ್ಟಗಳ ಮಳೆ ಸುರಿಸುವ ಮೋಡವೆ.

----------------------------------

Reg ID: BF25-5124

Please Note - You can vote only Once. If you have already voted - the voting will be disabled automatically by the system.

84
Votes
475
Views
8 Months
Since posted

VOTING Closed on Nov 30, 2025!

Scroll to Top