Submission 1893

ನಿನ್ನ ಕಾಣ್ಕೆ ಏನು

Submitted By: NARAYAN RAMAPPA RATHOD

----------------------------------

ಧರಣಿಯಲುದಿಸಿದ ಮೇಲೆ ನಿನ್ನ ಕಾಣ್ಕೆ ಏನು? ಸೂಯ೯ನದು ಬಿಸಿಲು ಬೆಳಗಿನ ಕಾಣ್ಕೆ ಚಂದ್ರ ತಾರೆಳ ಬೆಳದಿಂಗಳಿನ ಕಾಣ್ಕೆ ಭೂಮಿ ತಾಯಿಯದು ಅನ್ನನೀಡಿದ ಕಾಣ್ಕೆ ನದಿಸರೋವರದ್ದು ಸಿಹಿ ನೀರಿನ ಕಾಣ್ಕೆ ಸಮುದ್ರದ್ದು ಉಪ್ಪುರುಚಿ ನೀಡಿದ ಕಾಣ್ಕೆ ಬೆಟ್ಟ ಗುಡ್ಡಗಳದ್ದು ಪ್ರಕೃತಿ ಸೌಂದರ್ಯ, ವನ್ಯಜೀವಿಗಳ ಪೋಷಣೆಯ ಕಾಣ್ಕೆ ಮೋಡಗಳು ಮಳೆ ತಂದ ಕಾಣ್ಕೆ ಗಿಡ ಮರಗಳದ್ದು ನೆರಳು ಹೂವು ಹಣ್ಣುಗಳ ಕಾಣ್ಕೆ ಹಕ್ಕಿಗಳು ಸುಮಧುರ ಕಲರವ ನೀಡಿ ಕೀಟಗಳನ್ನು ಸವಿದು ರೈತನಿಗೆ ಸ್ನೇಹಿತರಾದ ಕಾಣ್ಕೆ ಪ್ರಾಣಿಗಳು ಹಾಲು ನೀಡಿದ ಕಾಣ್ಕೆ

----------------------------------

Reg ID: BF25-5123

Please Note - You can vote only Once. If you have already voted - the voting will be disabled automatically by the system.

18
Votes
187
Views
10 Months
Since posted

VOTING Closed on Nov 30, 2025!

Scroll to Top