Submission 1866

ಹೆಂಗೂಸು

Submitted By: ಚಿದಾನಂದ ಜಡಿಮಠ

----------------------------------

ಕಾರಿರುಳ ಕತ್ತಲುಬಾವಲಿಗಳು ಗೂಡುಕಟ್ಟಿವೆ ಗೋರವಂಕಗಳು ಗಡಚ್ಚಿಕ್ಕಿವೇ ಗೂಬೆಗಳು ಕಣ್ಣರಳಿಸಿ ಗೋಣಲಗಿಸಿ ಫಿರಂಗಿಜಾಲಿಯೊಳಗಡಗಿವೆ ಬಿಸಿರಕ್ತಹೀರುವ ಪಿಶಾಚಿಗಳು ಪಿಡಿಸುತಿವೆ ಉಸಿರೆಳದಾಡುವ ಹೆಣ್ಣುಗುಬ್ಬಚ್ಚಿಗಳು ಗೂಡುಗಾಲಲಿ ಮಗುಚಿಮಲಗಿವೆ ನಾಯಿ ನರಿ, ಕಟವಾಯಿ ಬಿರಿವಂತೆ ಅರಚುತಿವೆ ಸುಡಗಾಡಿನಲ್ಲೇನಿದೆ ಸ್ವಾಗತಕೆ ಮನೆಮಂದಿ ಕಾಯುವಂತೆ ಸಿಂಗಾರಗೊಂಡಿದೆ ಮಾಂಸಮುದ್ದೆ, ಶ್ವಾನದಹಿಂಡೆಲ್ಲ ಜೊಲ್ಲು ಸುರಿಸಿ ಸುತ್ತಾಕುತಿವೆ ಕಾಗೆ,ಮರಿಸಮೇತ ಬಂದಡರಿವೇ ರಣಹದ್ದುಗಳು ರಣ ರಣ ತಿರುಗುತಿವೆ ಅಲ್ಲಲ್ಲಿ ಚೆಲ್ಲಿದ ರಕ್ತದಂಟು ದಾರಿಯುದ್ದಕ್ಕೂ ಎಳೆದಾಡಿ ಎಸೆದ ಹೆಂಗೂಸಿನ ವಾಸನೆ ಅರೆಬೆರೆ ಬೆಂದ ದೇಹ ಎಂಜಲು ನಾಯಿಗಳ ದುರ್ಗಂಧ

----------------------------------

Reg ID: BF25-5113

Please Note - You can vote only Once. If you have already voted - the voting will be disabled automatically by the system.

0
Votes
87
Views
8 Months
Since posted

VOTING Closed on Nov 30, 2025!

Scroll to Top