ಆಟ-ಪಾಠ
Submitted By: Dr. Basavaraja G R
----------------------------------
ನಲ್ಲೆಯ ನಲಿವಿನ ಆಟ ನಲ್ಲನ ಎದೆಯಲಿ ಚಿನ್ನಾಟ ಬೇಡ ನಲ್ಲೆ ಈ ತುಂಟಾಟ ನಲ್ಲನಿಗದು ಪ್ರಾಣ ಸಂಕಟ ಆಡಬೇಡ ನನ್ನೊಂದಿಗೆ ಮುಚ್ಚು ಮರೆಯಾಟ ಸಹಿಸೆನು ನಾ ಅದರ ಪೀಕಲಾಟ ಅಡಿಸುತಿಹೆ ನೀ ನನ್ನ ದೊಂಬರಾಟ ನೋಡಿ ನಗುತ್ತಿಹರೆಲ್ಲಾ ನನ್ನೀ ಚೆಲ್ಲಾಟ ಬಳಕಿಸದಿರು ನಿನ್ನ ಮೈ ಮಾಟ ನಾನರಿಯೇ ಅದರ ಒಳನೋಟ ನಿಲ್ಲಿಸದಿದ್ದರೆ ನಿನ್ನ ಥಳಕು ಬಳಕಿನಾಟ ನಾ ಕಲಿಸುವ ನಿನಗೆ ತಕ್ಕ ಪಾಠ
----------------------------------
Reg ID: BF25-5091
Please Note - You can vote only Once. If you have already voted - the voting will be disabled automatically by the system.