Submission 1593

ವರ್ಷಧಾರೆ

Submitted By: Gangadevi Chakrasali

----------------------------------

ಘನಮೋಡ ಮುಗಿಲಗಲ ದಿನಕರ ಮರೆಯಾದನು ಹಗಲ ತಾರೆಗಳಾಚೆ ದೂಡಿ ಮಿಂಚು ನೀಡಿತು ಹೆಗಲ ಜೊತೆಯಾಯಿತು ಆರ್ಭಟದಿ ಗುಡುಗಿನೊಡಲ ಜೀವಿಗಳಿಗೆ ಗೂಡು ಸೇರುವ ತುಮುಲ ಸುರಿಯಿತು ಸುರಿಯಿತು ಟಪಟಪ ಮಳೆ ಖಗಮೃಗಗಳಲ್ಲಿ ಸಂತಸದ ಕಳೆ ಹಸಿರುಡುಗೆಯಲಿ ಮೈನೆರಿದಿಹಳು ಇಳೆ ಹೊತ್ತೊಯ್ಯಿತು ಓಣಿ ಓಣಿಯ ಕೊಳೆ ತುಂಬಿ ಹರಿಯಿತು ಊರಾಚೆಯ ಹೊಳೆ ಬಾಡಿದ ಗರಿಕೆಗೂ ಚಿಗುರುವ ಸಂಭ್ರಮ ತರುಲತೆಗಳಿಗೆ ಮಡಿಯ ಸರಿಗಮ ಮೆಲ್ಲನಾವರಿಸಿತು ಎಲ್ಲೆಲ್ಲೂ ಮಣ್ಣಘಮ ರೈತನ ಮೊಗದಲಿ ಹುಣ್ಣಿಮೆ ಚಂದ್ರಮ ಎಳೆಯರ ಹೆಜ್ಜೆಗಳಿಗೆ ಸಂತಸದ ತಕಧಿಮ

----------------------------------

Reg ID: BF25-5062

Please Note - You can vote only Once. If you have already voted - the voting will be disabled automatically by the system.

85
Votes
390
Views
9 Months
Since posted

VOTING Closed on Nov 30, 2025!

Scroll to Top