Submission 1487

ನನ್ನ ಒಲವು

Submitted By: Omkar Hegde

----------------------------------

ಎದೆಯಲ್ಲೇ ಉಳಿದ ಒಲವಿದು, ನೀ ಸಿಕ್ಕರೂ ಸಿಗದಿದ್ದರೂ ಈ ಪ್ರೀತಿ ನಿನ್ನದು. ಪ್ರೀತಿಯ ಹೆಸರಲ್ಲಿ ಮೈ ಮುಟ್ಟುವವರ ನಡುವೆ, ನಿನ್ನ ಕಂಡರೆ ಖುಷಿ ಪಡುವವನು ನಾನು. ಅವಳು ಬಾನಲಿ ಮೀನಗುವ ತಾರೆಯಂತೆ, ದೂರವಿದ್ದರೂ ಮನಕೆ ಮುದ ನೀಡುವ ಒಲವಿನ ಕಂತೆ, ಸಿಗದ ಮರೀಚಿಕೆಯೋ ಕಳೆದುಕೊಳ್ಳುವ ಭೀತಿಯೋ, ಅದೇಕೋ ಧೈರ್ಯ ಸಾಲಲಿಲ್ಲ ನನ್ನ ಪ್ರೀತಿ ಹೇಳಲಿಲ್ಲ; ಅಮಾಯಕ ನಾನು ಗೆಳತಿ ತಲೆ ಹೊಳೆಯಲಿಲ್ಲ . ನಾ ಕೇಳಲಿಲ್ಲ ; ನಿನ್ನ ಮರೆಯಲಿಲ್ಲ ; ಹುಚ್ಚು ಪ್ರೇಮ ನನ್ನದು ಇದಕೆ ಸೋಲಿಲ್ಲ ; ಸಾವಿಲ್ಲ....ಸಾವಿಲ್ಲ...

----------------------------------

Reg ID: BF25-5040

Please Note - You can vote only Once. If you have already voted - the voting will be disabled automatically by the system.

26
Votes
228
Views
1 Year
Since posted

VOTING Closed on Nov 30, 2025!

Scroll to Top