Submission 3799

ಸಮರದ ಸ್ಮರಣೆ

Submitted By: ರಮಾಬಾಯಿ ವಿಲಾಸ ಹಿರೇಮಣಿ

----------------------------------

ಅಡಿ-ಅಡಿ ಜಾಗಕ್ಕೂ ಗಡಿ-ಗಡಿ ಜಗಳಾಡುವರು, ಗಡಿಕಾಯುವ ಯೋಧರ ರಕ್ತ-ಸಿಕ್ತ ಚರಿತ್ರೆಯ ಮರೆತ್ತಿರುವರು, ಈ ಮೂರ್ಖ ಜನ..! ನ್ಯಾಯವ ಮಾರಿದರು ನೀತಿಯ ಒದ್ದವರು, ನಿಶ್ಚಿಂತರಾಗಲು ಕಾರಣರಾದ ದೇಶದ ಕಣ್ಮಣಿಗಳ ಕಣ್ಗಾವಲವನ್ನು ಮರೆತ್ತಿರುವರು. ಈ ಮೂರ್ಖ ಜನ..! ಸತ್ಯವ ಸಮಾಧಿಯ ಮಾಡಿದರು ಸುಳ್ಳಿನ ಮನೆಯ ಕಟ್ಟಿದರು, ಭಧ್ರಕೋಟೆ ಭುನಾದಿಯ ಸೈನಿಕರ ತ್ಯಾಗವ ಮರೆತ್ತಿರುವರು, ಈ ಮೂರ್ಖ ಜನ..! ಕರುಣೆಯ ಕಿತ್ತೆಸೆದರು ಕರಾಳ ಕೃತ್ಯಗಳ ಸೃಷ್ಟಿಸಿದರು, ನಿಸ್ವಾರ್ಥ ಸೇವಕರ ಸೇವೆಯ ಮರೆತ್ತಿರುವರು, ಈ ಮೂರ್ಖ ಜನ..! ನಾನು ನನ್ನದೆಂದು ಮರೆತ್ತರುವರು ತನ್ನದೇ ಮೇಲೆಂದು ಕುಣಿಯುತ್ತಿರುವರು, ತನು ಮನ ಧನ ಸಮರ್ಪಿಸಿ ಸಮರ ಸಾರಿದ ಸರದಾರ ಸಾಹಸ ಮರೆತ್ತಿರುವರು, ಈ ಮೂರ್ಖ ಜನ..!

----------------------------------

Reg ID: BF25-5855

Please Note - You can vote only Once. If you have already voted - the voting will be disabled automatically by the system.

0
Votes
122
Views
10 Months
Since posted

VOTING Closed on Nov 30, 2025!

Scroll to Top