Submission 3741

ಸಂಪತ್ತು

Submitted By: Jyothi Naik Rathod

----------------------------------

ಹೆಣ್ಣು ಹೊನ್ನು ಮಣ್ಣ ಸಿರಿಗೆ ಸೆಣಸಿ ಮಣ್ಣಾಗಿ ಹೋಗಿಹರು ಓದು ಸಿರಿಯ ಬಯಸಿದವರು ಬೆಳಕಾಗಿ ಮೀನುಗಿಹರು! ಬುದ್ಧ,ಬಸವ,ಗಾಂಧಿಯಂತೆ ನಾಡ ಸಿರಿಯಾಗಿರಿ ಬಾಬಾ ಸಾಹೇಬರಂತೆ ಜ್ಞಾನಿಯಾಗಿ ಗುಡುಗು ಸಿಡಿಲು ಆಗಿರಿ! ಕನಕ,ಪುರಂದರ, ಅಲ್ಲಮರರಂತೆ ಸುಗುಣ ಶೀಲರಾಗಿರಿ ಅರಿವ ಬೆಳಕು ಬಾಳ ಕೊಳಕು ಹಸನಾಗಿಸಿ ಸಾಗಿರಿ! ನಮ್ಮ ಉಸಿರು ನಾಡ ಹಸಿರು ಪ್ರಕೃತಿ ಪ್ರೇಮ ಹೆಚ್ಚಲಿ ವಿಕಾರ ಅಳಿದು ವಿನಯ ಮೊಳೆದು ನಾಡ ಸಿರಿ ಹಬ್ಬಲಿ! ಗುಣದ ಕ್ಷಾಮ ಇಲ್ಲ ಕ್ಷಮೆ ಅರಿತು ಬಾಳು ಅನುಜ ನಶಿಸೋ ಸಿರಿಯ ನೆಚ್ಚದಿರು ಬದುಕು ಹಸನಾದೀತು ಮನುಜ!

----------------------------------

Reg ID: BF25-5832

Please Note - You can vote only Once. If you have already voted - the voting will be disabled automatically by the system.

2
Votes
137
Views
10 Months
Since posted

VOTING Closed on Nov 30, 2025!

Scroll to Top