ಭೂಮಿಯೊಂದಿಗೆ ಬದುಕು
Submitted By: Shreedhar katral
----------------------------------
ತಿರುಗುವ ಭೂಮಿ ಎಲ್ಲವು ತೀರಿ ಹೋಗುವುದು ಅದೇ ಸೊಗಡು ಅದೇ ಸುಡುಗಾಡು ಗುರುತಿನ ಜನರಿಲ್ಲಿ, ಗುರು ಏಕೆ ಗೋತ್ರ ಬೇಕೆ ದುಡಿದು ದಣಿದು ಇದ್ದರೆ ಸಾಕೆ ನಕ್ಷೆಯ ನಶೆಯಲ್ಲಿ ನಶಿಸಿ ಹೋಗುವುದು ಸುಖವು ಜಾರಿ ಸಂಧರ್ಭಕ್ಕೆ ಶರಣಾಗುವುದು. ಮೋಹದ ದೇಹಗಳು ತೀರದ ದಾಹಗಳು ಎಲ್ಲ ಭಾವಗಳ ಮಿಶ್ರಿತ ಜೀವಗಳು. ಕಲೆಯ ಕೊಲ್ಲುವ ಕೊಳೆಯ ಕೊಳ್ಳುವ ಕೊಳಕು ಬೆಳಕು ಎಲ್ಲಾ ಬೇಕೆಂದು ಬಾಳುವ ಹಾಳೆಗಾಗಿ ಹಾಳಾಗಿ ನಾಳೆಗಾಗಿ ಆಳಾಗಿ ಹಾಗೂ ಹೀಗೂ ಎಲ್ಲಾ ಬದುಕಿಗಾಗಿ ಎಲ್ಲರಿಗೂ ಸೇರೊಣ ಏನೊಂದೂ ಮಾಡೋಣ ನಮ್ಮಷ್ಟಕ್ಕೆ ನಮ್ಮ ಇಷ್ಟಕ್ಕೆ ನಾವ್ ಇರೋಣ.
----------------------------------
Reg ID: BF25-5786
Please Note - You can vote only Once. If you have already voted - the voting will be disabled automatically by the system.