Submission 3597

ಕಲಿಸಿರುವೆ

Submitted By: ಪೂರ್ಣಿಮಾ ಕರಡಿಗಿ ವಿಜಯನಗರ

----------------------------------

ನಾ ನೋಡುತ್ತಲೇ ಇರುವೆ ನಿನ್ನ, ನೀನೇರುತ್ತಲೇ ಇರುವೆ ಗೋಡೆ ಬೆನ್ನ| ದೇಹ ದೊಡ್ಡದಣ್ಣ,ಕೈಕಾಲು ಸಣ್ಣ, ಕಚ್ಚಿ ಬಾಯಲಿ ಸಾಗಿಸುತ್ತಿರುವ ತಿನಿಸನ್ನ||೧|| ಸಾಲಲಿ ಸಾಗುತ್ತಿದೆ‌ ಶಿಸ್ತಿನ ದಂಡು, ವಾಸನೆ ಹಿಡಿದ ಬೆಲ್ಲ-ಸಕ್ಕರೆ ಕಂಡು| ಅವಸರದಿ ಓಡುತ್ತಿವೆ ಒಂದಕ್ಕೊಂದು ಮುಖ ತಾಗಿಸಿಕೊಂಡು, ಬೇಸರದಿ ನೋಡುತ್ತಿದೆ,ತಪ್ಪಿದ ಸಾಲ ಹುಡುಕಿಕೊಂಡು ||೨|| ಪದೇಪದೆ ಬೀಳುತ್ತಿದೆ,ಛಲವ ಮೆರೆಯುತ್ತಿದೆ, ಒತ್ತು ಸಾಗುತ್ತಿದೆ,ಗೋಡೆ ಏರುತ್ತಿದೆ| ಮೌನದಲಿ ಜೊತೆಗಾರರ ಕೂಗಿ ಕರೆಯುತ್ತಿದೆ, ಕಾರ್ಯದಲಿ ಜಗಕೆ ಸಾರಿ ತಿಳಿಸುತ್ತಿದೆ||೩||

----------------------------------

Reg ID: BF25-5787

Please Note - You can vote only Once. If you have already voted - the voting will be disabled automatically by the system.

0
Votes
143
Views
10 Months
Since posted

VOTING Closed on Nov 30, 2025!

Scroll to Top