Submission 3534

ಮಹಾದೇವಿ (ದಿವಂಗತ ಮಡದಿ)

Submitted By: sadanand v Telgadi

----------------------------------

ಹುಡುಕಿದೆ ಹುಡುಕಿದೆ ನನ್ನವಳಿಗಾಗಿ ಅವಳಿಗಾಗಿ ಸುತ್ತಾಡಿದೆ ಅಲೆದಾಡಿದೆ ಕೈ ಮುಗಿಯದ ಕಾಣದ ದೇವರಿಲ್ಲ. ಹುಡುಕದ ಹೋಗದ ದಾರಿ ಇಲ್ಲ. ನನ್ನ ಉಸಿರಿಗಾಗಿ ಅಲೆದಾಡದ ದಿನವಿಲ್ಲ..!!! ಇದ್ದಾಗ ಮಾಡಲಿಲ್ಲ ಪ್ರೀತಿ ಎಳ್ಳಷ್ಟು ಇಲ್ಲದಾಗ ಪ್ರೀತಿಯ ಹಸಿವು ಬೇಕಾದಷ್ಟು ಜೀವನ ಸಾಗಿದೆ. ಇದ್ದಾಗ ಇಲ್ಲದ ನಡುವೆ..!!! ಹುಣ್ಣಿಮೆಯ ಚಂದಿರ ನೋಡಲು ಚಂದ.. ನೀ ಜೊತೆಗಿನ ಆ ಜೀವನ ಪ್ರತಿದಿನ ಚೆಂದ..!! ಸಾಗುತ್ತಿರುವೆನು ನಿನ್ನಯ ನೆನಪಿನಲ್ಲಿ ನಿನ್ನೆಗೂ ಇಂದಿಗೂ. ನಾಳೆಗೂ..!! ಕೋಟಿಯಲ್ಲಿ ಒಬ್ಬಳು ನನ್ನ ಮಡದಿ, ಆದಳು ಬೂದಿ ಕಣ್ಣ ಮುಂದೆಯೇ ನಂಬಲಾರದ ಕಹಿ ಸತ್ಯ...!!!

----------------------------------

Reg ID: BF25-5763

Please Note - You can vote only Once. If you have already voted - the voting will be disabled automatically by the system.

46
Votes
477
Views
11 Months
Since posted

VOTING Closed on Nov 30, 2025!

Scroll to Top