Submission 3249

ಪಗಾರ ಇಲ್ಲದ ನೌಕರಿ

Submitted By: Nagaratnaa ayatti

----------------------------------

ನಮಗ್ಯಾಕ ಬೇಕ್ರಿ ಈ ಪಗಾರ ಇಲ್ಲದ ನೌಕ್ರಿ ದಿನವೆಲ್ಲ ಗಾಣದಎತ್ತಿನಂಗ ದುಡಿಬೇಕ್ರಿ ಮನೆಯವರ ಕೈಯಿಂದ ಬೈಸ್ಕೊಬೇಕ್ರಿ ಅತ್ತೆಮಾವರ ಸೇವೆ ಮಾಡಬೇಕ್ರಿ ಬಂದವ್ರ ಹೋದವ್ರ ಚಾಕ್ರಿ ನೋಡ್ಕೋಬೇಕ್ರಿ. ನಮಗ್ಯಾಕ ಬೇಕ್ರಿ ಈ ಪಗಾರ ಇಲ್ಲದ ನೌಕ್ರಿ ಬೇಗ ಬೇಗ ಚಹಾ ನಾಷ್ಟ ಮಾಡಬೇಕ್ರಿ ಮಕ್ಕಳಿಗೆಲ್ಲ ಶಾಲೆಗಾಡಿಗಿ ಕಳಿಸಬೇಕ್ರಿ ಅಡುಗೆ ಮಾಡಿ ಗಂಡಗ ಬಡಿಸಬೇಕ್ರಿ ಟಾಯ್ ಬೆಲ್ಟ್ ಕರ್ಚೀಫ್ ಕೊಟ್ಟು ಕಳಿಸ್ಬೇಕ್ರಿ... ನಮಗ್ಯಾಕ ಬೇಕ್ರಿ ಈ ಪಗಾರ ಇಲ್ಲದ ನೌಕ್ರಿ ಬರಾಗ ಮೈಸೂರು ಮಲ್ಲಿಗೆ ತಂದಾರ್ರೀ ಗಿರ ಗಿರನೆ ತಿರಗಸಿ ಜಡೆಗೆ ಮುಡಿಶಾರ್ರೀ ಗಲ್ಲದ ಮ್ಯಾಲೊಂದು ಬೆಲ್ಲದಮುತ್ತ ಕೊಟ್ಟರ್ರಿ ಮುಂಜಾನಿಂದ ಮಾಡಿದ ಕೆಲಸ ಮರೆತ್ಹೋಯ್ತ್ರಿ... ನಮಗ ಪಗಾರ ಯಾಕ ಬೇಕ್ರಿ ಗಂಡನ ಪ್ರೀತಿ ಒಂದಿದ್ರೆ ಸಾಕ್ರಿ

----------------------------------

Reg ID: BF25-5632

Please Note - You can vote only Once. If you have already voted - the voting will be disabled automatically by the system.

1
Votes
118
Views
11 Months
Since posted

VOTING Closed on Nov 30, 2025!

Scroll to Top